ಡೈಲಿ ವಾರ್ತೆ: 09/Sep/2024
ಹಂಗಳೂರು: ಕುಸಗಿಡ್ಲದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ – ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ ಕಾರ್ಯಚರಣೆ, ಅರಣ್ಯ ಇಲಾಖೆಗೆ ಹಸ್ತಾಂತರ
ಕುಂದಾಪುರ: ಬೃಹತ್ ಗಾತ್ರದ ಹೆಬ್ಬಾವೊಂದು ಮನೆಯ ಆವರಣದಲ್ಲಿ ಪ್ರತ್ಯಕ್ಷವಾದ ಘಟನೆ ಭಾನುವಾರ ರಾತ್ರಿ ಕುಂದಾಪುರ ತಾಲೂಕಿನ ಹಂಗಳೂರಿನ ಕುಸಗಿಡ್ಲದಲ್ಲಿ ನಡೆದಿದೆ.
ಕುಸಗಿಡ್ಲದಲ್ಲಿರುವ ಲಕ್ಷ್ಮಿ ದೇವಾಡ್ತಿ ಇವರ ಮನೆಯ ಆವರಣದಲ್ಲಿ ಸುಮಾರು 10 ಅಡಿ ಉದ್ದದ 30 ಕೆಜಿ ತೂಕದಷ್ಟಿರುವ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು ಮನೆ ಮಂದಿ ಭಯಬೀತರಾಗಿ ತಕ್ಷಣ ಮನೆಯವರು ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಲೋಕೇಶ್ ಅಂಕದಕಟ್ಟೆ ಹಾಗೂ
ಸ್ಥಳೀಯ ಯುವಕರು ಸೇರಿ ಕಾರ್ಯಾಚರಣೆ ನಡೆಸಿ 10 ಅಡಿ ಉದ್ದದ ಹೆಬ್ಬಾವುವನ್ನು ಸೆರೆಹಿಡಿದು ಕುಂದಾಪುರ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಪ್ರಕಾಶ್ ದೇವಾಡಿಗ, ಅಕ್ಷಯ್ ದೇವಾಡಿಗ, ಜಗದೀಶ್ ದೇವಾಡಿಗ, ಅಭಿಷೇಕ್ ದೇವಾಡಿಗ, ಪಣಿರಾಜ್ ಹೆಬ್ಬಾರ್, ಶಶಿಧರ ಗಾಣಿಗ, ವಿಜೇತ್ ಗಾಣಿಗ, ಸತೀಶ್ ದೇವಾಡಿಗ, ಹಾಗೂ ಸಿ. ಎಂ. ಫ್ರೆಂಡ್ಸ್ ಸದಸ್ಯರು ಭಾಗಿಯಾಗಿದ್ದರು.