ಡೈಲಿ ವಾರ್ತೆ: 11/Sep/2024

ಕನ್ನಡತಿ’ ನಟ ಕಿರಣ್​ ರಾಜ್​ ಕಾರು ಅಪಘಾತ – ಐಸಿಯುನಲ್ಲಿ ಚಿಕಿತ್ಸೆ!

ಬೆಂಗಳೂರು: ರಾನಿ ಚಿತ್ರದ ನಾಯಕ, ಕನ್ನಡತಿ ಸೀರಿಯಲ್‌ ನಟ ಕಿರಣ್‌ ರಾಜ್‌ ಪ್ರಯಾಣಿಸುತ್ತಿದ್ದ ಕಾರು ಕೆಂಗೇರಿ ಬಳಿ ಅಪಘಾತವಾಗಿದೆ.

ಮುದ್ದರಾಯನ ಪಾಳ್ಯ ವೃದ್ದಾಶ್ರಮಕ್ಕೆ ಹೋಗಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕಾರು ಚಾಲನೆ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಗುದ್ದಿದ ರಭಸಕ್ಕೆ ಕಿರಣ್‌ ರಾಜ್ ಗೆ ಎದೆಯ ಭಾಗಕ್ಕೆ ಪೆಟ್ಟಾಗಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಿರಣ್‌ ರಾಜ್‌ ಪ್ರಾಣಾಪಾಯದಿಂದ ಪಾರಾಗಿದ್ದು ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕಿರುತೆರೆಯಲ್ಲಿ ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ ಬಿಡುಗಡೆಗೆ ಒಂದು ದಿನ ಇರುವಾಗ ಅಪಘಾತ ಸಂಭವಿಸಿದೆ.