ಡೈಲಿ ವಾರ್ತೆ: 11/Sep/2024

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಜೆಪಿಸಿಗೆ ಮನವಿ ಸಲ್ಲಿಸಲು ವಕ್ಫ್ ಸಲಹಾ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಿ.ಹೆಚ್. ಅಬ್ದುಲ್ ಮುತ್ತಲಿ ವಂಡ್ಸೆ ಕರೆ

ವಕ್ಫ್ ಸೊತ್ತುಗಳು ಅಂದರೆ ಮುಸ್ಲಿಂ ಸಮುದಾಯದವರು ತನ್ನ ಸಮುದಾಯದ ಧಾರ್ಮಿಕ , ಸಾಮಾಜಿಕ , ಶೈಕ್ಷಣಿಕ ಇನ್ನಿತರ ಅಗತ್ಯಗಳಿಗಾಗಿ ವಕ್ಫ್ ಮಾಡಿದ ಅಂದರೆ ದಾನ ನೀಡಿದ ಆಸ್ತಿಗಳಾಗಿವೆ ಅದು ಅಲ್ಲಾಹನ ಸೊತ್ತುಗಳು ಆಗಿವೆ
ಈ ಸೊತ್ತಿನ ರಕ್ಷಣೆ ಮತ್ತು ವ್ಯವಸ್ಥಾಪನೆಯ ಅಧಿಕಾರವುಳ್ಳ ಸಂಸ್ಥೆಗಳ ಜವಾಬ್ದಾರಿಯನ್ನು ಇಸ್ಲಾಮಿ ನಂಬಿಕೆಗಳಲ್ಲಿ ವಿಶ್ವಾಸವಿಲ್ಲದ ಮುಸ್ಲಿಮೇತರಿಗೆ ನೀಡಬೇಕು ಎನ್ನುವುದು ಮುಸ್ಲಿಮರ ಸೊತ್ತುಗಳನ್ನು ಕಬಳಿಸುವ ಹುನ್ನಾರವಾಗಿದೆ ಕೇಂದ್ರ ಸರ್ಕಾರದ ಈ ನಡೆ ಕಾನೂನು ಬಾಹಿರವಾಗಿದೆ
ಸಮುದಾಯದ ಸಬಲೀಕರಣ, ಶೈಕ್ಷಣಿಕ ಉನ್ನತಿ, ಧಾರ್ಮಿಕ ಕಾರ್ಯಗಳಿಗೆ ಬಳಕೆಯಾಗಬೇಕಾದ ಸೊತ್ತುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದು ಸಮುದಾಯ ಭಾಂದವರಾದ ನಮ್ಮ ಕರ್ತವ್ಯವಾಗಿದೆ
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಮೇಲ್ ಮ್ಯಸೇಜ್ ಗಳನ್ನು ವಕ್ಫ್ ಹಾಗೂ ಇನ್ನಿತರ ಮುಸ್ಲಿಂ ಸಮುದಾಯದ ಸಂಘ-ಸಂಸ್ಥೆಗಳ ನಾಯಕರು ಹಾಗೂ ಮುಸ್ಲಿಂ ಸಮುದಾಯದ ಸರ್ವ ಬಾಂಧವರು ಜೆಪಿಸಿ (ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ)ಗೆ ಮನವಿ ಸಲ್ಲಿಸಬೇಕೆಂದು ವಕ್ಫ್ ಸಲಹಾ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಿ ಹೆಚ್ ಅಬ್ದುಲ್ ಮುತ್ತಲಿ ವಂಡ್ಸೆ ವಿನಂತಿಸಿದ್ದಾರೆ.

ಇತ್ತೀಚೆಗೆ ಮಣಿಪಾಲ ವಕ್ಫ್ ಕಛೇರಿಯಲ್ಲಿ ನಡೆದ ವಕ್ಫ್ ಅಧಿಕಾರಿ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು
ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ಆಯ್ಕೆ ಮಾಡಲ್ಪಟ್ಟ ಕರ್ನಾಟಕದ ಕೆಲವೊಂದು ಪ್ರಮುಖರನ್ನು ಕಂಡು ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು

ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಸಿ ಹೆಚ್ ಅಬ್ದುಲ್ ಮುತ್ತಲಿ ವಂಡ್ಸೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಕ್ಫ್ ಅಧಿಕಾರಿ, ಸಲಹಾ ಸಮಿತಿ ಉಪಾಧ್ಯಕ್ಷರುಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಲು ಈ ಕೆಳಗಿನ ಲಿಂಕನ್ನು ಅಥವಾ ಕ್ಯೂಆರ್ ಕೋಡ ಅನ್ನು

https://waqfbill2024.com

ಸುಲಭವಾಗಿ ಓಪನ್ ಮಾಡಿದಾಗ ನಿಮ್ಮ ಹೆಸರು ಬರೆಯಲು ಒಂದು ಬಾಕ್ಸ್ ಕಾಣುತ್ತೆ ಅಲ್ಲಿ ನಿಮ್ಮ ಹೆಸರು ಬರೆದು ಅಲ್ಲೇ ಕೆಳಗೆ ಕೆಂಪು ಬಣ್ಣದಲ್ಲಿ SEND EMAIL
ಎಂದು ಬರುತ್ತೆ ಅದನ್ನು ಕ್ಲಿಕ್ ಮಾಡಿದಾಗ ಅದು ನೇರವಾಗಿ ನಿಮ್ಮ ಈಮೇಲ್ ಪೇಜಿಗೆ ಕನೆಕ್ಟ್ ಆಗುತ್ತದೆ ಅಲ್ಲಿ ಇಮೇಲ್ ಸೆಂಡ್ ಮಾಡಿ

ವಿ•ಸೂ:13-09-2024 ಕೊನೆಯ ದಿನವಾಗಿದ್ದು ಇದಕ್ಕೆ ಮುಂಚಿತವಾಗಿ ಈ ಮೇಲೆ ಕಾಣಿಸಿದ ಲಿಂಕ್ ಅಥವಾ QR ಕೋಡ್ ಮೂಲಕ ಆಕ್ಷೇಪಣೆ ಮಾಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ