ಡೈಲಿ ವಾರ್ತೆ: 26/Sep/2024

ಕೋಟ ಶ್ರೀ ಅಮೃತೇಶ್ಚರಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆ.

ಕೋಟ: ಇಲ್ಲಿನ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ ನೂತನ ವ್ಯವಸ್ಥಾಪನಾ ಸಮಿತಿ ಆಯ್ಕೆ ಗುರುವಾರ ಪ್ರಕಟಗೊಂಡಿದ್ದು ಅದರಂತೆ ನೂತನ ಸಮಿತಿಯ ಟ್ರಸ್ಟಿಗಳಾಗಿ ಆನಂದ್ ಸಿ ಕುಂದರ್, ಶಿವ ಪೂಜಾರಿ, ಸುಧಾ ಎ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ದೇವದಾಸ್ ಕಾಂಚನ್, ಸುಭಾಷ್ ಶೆಟ್ಟಿ,ರತನ್ ಐತಾಳ್, ಚಂದ್ರಶೇಖರ್ ಆಚಾರ್ ಹಾಗೂ ಪ್ರಧಾನ ಅರ್ಚಕ ಪ್ರತಿನಿಧಿ ಆಯ್ಕೆಯಾಗಿದ್ದಾರೆ.

ಮುಂದಿನ ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ನಡೆಯಲಿದೆ.