ಡೈಲಿ ವಾರ್ತೆ: 27/Sep/2024

ಉಡುಪಿ ಜಿಲ್ಲೆಯಲ್ಲಿ ವಾಹನಗಳ ಬ್ಯಾಟರಿ ಕಳ್ಳತನದ ಗ್ಯಾಂಗ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ವಾಹನಗಳ ಬ್ಯಾಟರಿ ಕಳ್ಳತನವಾಗುತ್ತಿದ್ದು ನಿಲ್ಲಿಸಿದ ವಾಹನಗಳ ಬ್ಯಾಟರಿಗಳೆ ಇವರ ಟಾರ್ಗೆಟ್, ಎಲ್ಲೆ ವಾಹನಗಳನ್ನು ನಿಲ್ಲಿಸಿರಲಿ ಯಾರು ಇಲ್ಲವೆಂದು ಗುತ್ತುಪಡಿಸಿಕೊಂಡು ವಾಹಗಳ ಬ್ಯಾಟರಿ ಕಳ್ಳತನ ಮಾಡುವುದು ಕಂಡು ಬಂದಿದೆ.

ಉಡುಪಿ ಹಾಗೂ ಶಿರಿಯಾರ ಮೆಸ್ಕಾಂ ಬಳಿ ನಿಲ್ಲಿಸಲಾದ ಮೆಸ್ಕಾಂನ ಹೊಸ ಲಾರಿಯ ಬ್ಯಾಟರಿಯನ್ನು ಕಳ್ಳತನ ಮಾಡಿದ್ದು ಅದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತಿಚಿನ ದಿನಗಳಲ್ಲಿ ಕಳ್ಳತನ ಉಡುಪಿ ಜಿಲ್ಲೆಯಲ್ಲಿ ಜಾಸ್ತಿ ಆಗಿದ್ದು ಈ ಕಳ್ಳತನ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.