ಡೈಲಿ ವಾರ್ತೆ: 04/OCT/2024

ಸ್ನಾನಕ್ಕೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ಅಳ್ನಾವರ: ಹಳ್ಳದಲ್ಲಿ ಸ್ನಾನಕ್ಕೆ ಹೋದ ಯುವಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಹಿಂಬಾಗದಲ್ಲಿನ ಡೌಗಿ ನಾಲಾ ಹಳ್ಳದಲ್ಲಿ ಅ. 04 ರಂದು ಶುಕ್ರವಾರ ನಡೆದಿದೆ.

ಮೃತಯುವಕ ಅಮೃತ ನಗರ ನಿವಾಸಿ ಪವನ ಶೇಖಪ್ಪ ಬಂಡಿವಡ್ಡರ (16) ಎಂದು ಗುರುತಿಸಲಾಗಿದೆ.

ಬೆಳಗಿನ ಜಾವ ಸ್ನಾನಕ್ಕೆ ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಈಜಲು ಬಾರದೆ ದಡ ಸೇರಲು ಸೆಣಸಾಡಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.