ಡೈಲಿ ವಾರ್ತೆ: 10/OCT/2024

ಕುಂದಾಪುರ: ರೈಲಿಗೆ ಚಿರತೆ ಬಲಿ!

ಕುಂದಾಪುರ: ರೈಲು ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ನಾಡ ಗ್ರಾಮದ ಬಡಾಕೆರೆಯ ಸೌಪರ್ಣಿಕ ನದಿಗೆ ನಿರ್ಮಿಸಲಾದ ರೈಲ್ವೇ ಮೇಲ್ಸೇತುವೆಯಲ್ಲಿ ನಡೆದಿದೆ.

ಸುಮಾರು 5 ವರ್ಷದ ಗಂಡು ಚಿರತೆಯು ಅರಣ್ಯದಿಂದ ಆಹಾರ ಅರಸಿಕೊಂಡು ಬಂದು ರೈಲ್ವೆ ಹಳಿ ದಾಟುವಾಗ ಈ ಅವಘಡ ಸಂಭವಿಸಿರಬಹುದು ಎಂದು ತಿಳಿಯಲಾಗಿದೆ.

ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕುಂದಾಪುರ ವಲಯ ಅರಣ್ಯಾಧಿಕಾರಿ ಹಾಗೂ ಸಿಬಂದಿ ಚಿರತೆಯ ಮೃತದೇಹ ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಬಳಿಕ ಕುಂದಾಪುರ ವಲಯ ಅರಣ್ಯ ಇಲಾಖೆಯ ವಂಡ್ಸೆ ಡಿಪ್ಪೋದಲ್ಲಿ ಚಿರತೆಯ ಅಂತ್ಯ ಸಂಸ್ಕಾರ ನಡೆಸಲಾಯಿತು.