ಡೈಲಿ ವಾರ್ತೆ: 12/OCT/2024

ಹೊನ್ನಾಳ ಉರೂಸ್ ಗೆ ಚಾಲನೆ

ಬ್ರಹ್ಮಾವರ: ಹಝ್ರತೇ ಹಜಾನಿಮಾ ರಹಮತುಲ್ಲಾಹಿ ಅಲೈಹಾ ದರ್ಗಾ ಶರೀಫ್ ಹೊನ್ನಾಳ ಇವರ ಎರಡು ದಿನಗಳ ವಾರ್ಷಿಕ ಉರೂಸ್ ಸಮಾರಂಭಕ್ಕೆ ಅ. 12 ರಂದು ಶನಿವಾರ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು.

ಜಮಾತಿನ ಖತೀಬರಾದ ಮೌಲಾನಾ ಅಖ್ಲಾಕ್ ರಝ್ವಿ ದುವಾ ನೆರವೇರಿಸಿದರು. ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಎಂ, ಉರೂಸ್ ಸಮಿತಿಯ ಅಧ್ಯಕ್ಷರಾದ. ಬಿ. ಎಸ್ಸ್ ಸುಬ್ಹಾನ್ ನೇತೃತ್ವ ನೀಡಿದರು. ನಂತರ ದರ್ಗಾ ಶರೀಫ್ ನಲ್ಲಿ ಖತ್ಮುಲ್ ಕುರ್ಆನ್ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಿತು.

ಮಸೀದಿಯ ಪ್ರದಾನ ಕಾರ್ಯದರ್ಶಿ ಮುಹಮ್ಮದ್ ಖತ್ತಾಬ್ ಸ್ವಾಗತಿಸಿದರು.
ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಮಸೀದಿ, ಮದ್ರಸಾ, ಮುಸ್ಲಿಂ ಜಮಾತಿನ ಎಸ್ಸ್ ಎಸ್ಸ್ ಎಸ್ಸ್, ಹಾಗೂ ಜಮಾತ್ ನಾಯಕರು ಹಾಗೂ ಸದಸ್ಯರು ಹಾಜರಿದ್ದರು.

ಎರಡು ದಿನದ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 12 ಮಗ್ರೀಭ್ ನಮಾಜಿನ ನಂತರ ಮೌಲಾನಾ ಅಹ್ಮದ್ ಶರೀಫ್ ಸಅದಿ ಪ್ರಿನ್ಸೀಪಾಲರು ತೈಬಾ ಗಾರ್ಡನ್ ಬಂಗ್ಲೆಗುಡ್ಡೆ ಕಾರ್ಕಳ ಇವರ ಉರೂಸ್ ಯಾಕೇ ಹೇಗೆ ಎಂಬ ವಿಷಯದಲ್ಲಿ ಕನ್ನಡ ಪ್ರಭಾಷಣ ನಡೆಯಲಿದೆ.
ಇಶಾ ನಮಾಜಿನ ನಂತರ ಮುನಾಝೀರೇ ಅಹ್ಲೇ ಸುನ್ನತ್ ಖತೀಬೇ ಹಿಂದುಸ್ತಾನ್ ಮುಹಮ್ಮದ್ ಫಾರೂಕ್ ಖಾನ್ ರಝ್ವಿ ನಾಗ್ಪುರ ಇವರಿಂದ ಅಹ್ಲೇ ಸುನ್ನತ್ ವ ಜಮಾಅತ್ತ್ ನ ವಿಷಯದಲ್ಲಿ ಉರ್ದು ಪ್ರಬಾಷಣ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಮುತ್ತಾಲಿ, ಮುಫ್ತೀ ಬದ್ರುದ್ದೀನ್ ಮಿಸ್ಬಾಹಿ ಹಾಗೂ ಉಡುಪಿ ಜಿಲ್ಲೆಯ ವಿವಿಧ ಮಸೀದಿಗಳ ಇಮಾಮರು,ಆಡಳಿತ ಸಮಿತಿಯ ನಾಯಕರು ಸಾಮಾಜಿಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

ಅ. 13 ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ದಫ್ ಹಾಗೂ ರಾತೀಭ್ ನೊಂದಿಗೆ ಬ್ರಹತ್ ಸಂದಲ್ ಜಾಥಾ ನಡೆಯಲಿದೆ. ಮದ್ಯಾಹ್ನ 12 ಗಂಟೆಯಿಂದ 3 ಗಂಟೆಯ ತನಕ ಸಾರ್ವಜನಿಕ ಊಟೋಪಚಾರ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಸ್ತ ನಾಗರಿಕರು ಭಾಗವಹಿಸಿದುರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಡಳಿತ ಸಮಿತಿಯ ಕೇಳಿಕೊಳ್ಳುತ್ತಿದ್ದೇವೆ.