ಡೈಲಿ ವಾರ್ತೆ: 23/OCT/2024
ಸುರತ್ಕಲ್: ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದ ಯುವಕ ನೀರುಪಾಲು
ಸುರತ್ಕಲ್: ಸಮುದ್ರ ಕಿನಾರೆಯ ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಅ. 22 ರಂದು ಮಂಗಳವಾರ ಮುಕ್ಕ ರೆಡ್ ರಾಕ್ ಬಳಿ ಮಂಗಳವಾರ ಸಂಜೆ ನಡೆದಿದೆ.
ನೀರುಪಾಲದ ಯುವಕ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಿವಾಸಿ, ಕೃಷ್ಣಕುಮಾರ್ ಸೋಮಯಾಜಿ ಅವರ ಪುತ್ರ ಪ್ರಜ್ವಲ್ (21) ಎಂದು ತಿಳಿದು ಬಂದಿದೆ.
ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರೊಂದಿಗೆ ಅ.22ರ ಮಂಗಳವಾರ ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.