ಡೈಲಿ ವಾರ್ತೆ: 06/NOV/2024

ಭಟ್ಕಳ: ಮೂವರ ಮೇಲೆ ಹೆಜ್ಜೇನು ದಾಳಿ – ವೃದ್ಧೆ ಸ್ಥಿತಿ ಗಂಭೀರ

ಭಟ್ಕಳ: ಒಂದೇ ಕುಟುಂಬದ ಮೂವರ ಮೇಲೆ ಹೆಜ್ಜೇನು ದಾಳಿ ಮಾಡಿ ಒರ್ವೆ ವೃದ್ಧೆ ಗಂಭೀರಗೊಂಡ ಘಟನೆ ನ. 5 ರಂದು ಮಂಗಳವಾರ ಭಟ್ಕಳ ಜಾಲಿಕೋಡಿಯಲ್ಲಿ ನಡೆದಿದೆ.

ಹೆಜ್ಜೇನು ದಾಳಿಗೊಳಗಾದ ಮಾಸ್ತಮ್ಮ ಮಂಜಪ್ಪ ನಾಯ್ಕ (70) ಜಾನಕಿ ನಾಯ್ಕ (37) ಸುರೇಶ ನಾಯ್ಕ (45) ಈ ಮೂವರು ತಮ್ಮ ಮನೆಯಲ್ಲಿರುವ ವೇಳೆ ಏಕಾಏಕಿ ಎಲ್ಲಿಂದಲೋ ಬಂದ ಹೆಜ್ಜೇನು ಮನೆಯ ಒಳಗೆ ನುಗ್ಗಿ ಇವರ ಮೇಲೆ ದಾಳಿ ಮಾಡಿದೆ. ತಕ್ಷಣ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದರಲ್ಲಿ 70 ವರ್ಷದ ವೃದ್ಧೆ ಸ್ಥಿತಿ ಗಂಭೀರವಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿರುವ ಐ.ಸಿ.ಯು ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇನ್ನಿಬ್ಬರು ಕೂಡ ಭಟ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.