ಡೈಲಿ ವಾರ್ತೆ:08/DEC/2024

ವರದಿ ಅಬ್ದುಲ್ ರಶೀದ್ ಮಣಿಪಾಲ, ಕೃಪೆ ಗಣೇಶ್ ರಾಜ್ ಸರಳೆಬೆಟ್ಟು

ಪರ್ಕಳ: ಕೆಟ್ಟು ನಿಂತ ನೀರಿನ ಟ್ಯಾಂಕರ್ ಗೆ ಬೈಕ್ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

ಉಡುಪಿ: ಕೆಟ್ಟುನಿಂತ ನೀರಿನ ಟ್ಯಾಂಕರ್ ಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ. 8 ರಂದು ಭಾನುವಾರ ಸಂಜೆ ಪರ್ಕಳ SBI ಬ್ಯಾಂಕ್ ಬಳಿ ಸಂಭವಿಸಿದೆ.

ಮೃತಪಟ್ಟ ಬೈಕ್ ಸವಾರ ಶೆಟ್ಟಿಬೆಟ್ಟು ದೇವು ಪೂಜಾರಿ ಪುತ್ರ ಸೃಜನ್ ಸಾಗರ್(22) ಎಂದು ಗುರುತಿಸಲಾಗಿದೆ.

ಟೈಯರ್ ಪಂಚರ್ ಆಗಿ ರಸ್ತೆಯಲ್ಲಿ ನಿಂತಿದ್ದ ನೀರಿನ ಟ್ಯಾಂಕ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.
ಸೃಜನ್ ಸಾಗರ್ ಇತ್ತೀಚೆಗೆ ಮಣಿಪಾಲದ ಕೆಎಂಸಿಯಲ್ಲಿ ಉದ್ಯೋಗ ಗಳಿಸಿಕೊಂಡಿದ್ದಾರೆ.
ಆದರೆ ದುರಾದೃಷ್ಟವಶಾತ್ ಇಂದು ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.

ಮಣಿಪಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.