ಡೈಲಿ ವಾರ್ತೆ:09/DEC/2024

ದಕ್ಷಿಣ ಕನ್ನಡ: ಸಾಮಾಜಿಕ ಜಾಲತಾಣದಲ್ಲಿ ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಪೋಸ್ಟ್ – ಆರೋಪಿ ಬಂಧನ

ಬಂಟ್ವಾಳ : ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಬರಹ ಬರೆದು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ .

ಅರಳ ಗ್ರಾಮದ ನವಗ್ರಾಮ ಸೈಟ್ ನಿವಾಸಿ ಜಯ ಪೂಜಾರಿ ಎಂಬಾತ ಬಂಧಿತ ಆರೋಪಿ.

ಆರೋಪಿ ‌ಜಯ ಪೂಜಾರಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಧರ್ಮ, ಧರ್ಮಗಳ ಮಧ್ಯೆ ಕೋಮುಭಾವನೆ ಕೆರಳುವ ರೀತಿಯಲ್ಲಿ, ಮಹಿಳೆಯರ ಬಗ್ಗೆ ಮಾನಕ್ಕೆ ಕುಂದುಂಟಾಗುವ, ತೇಜೋವಧೆಯುಂಟಾಗುವ ರೀತಿಯಲ್ಲಿ ಅವಹೇಳನಕಾರಿಯಾಗಿ ಬರಹ ಬರೆದು ಪೋಸ್ಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವಂತೆ ಮಾಡಿರುವುದರ ವಿರುದ್ದ ಬಂಟ್ವಾಳ ಗ್ರಾಮಾಂತರ ಪೋಲೀಸರು ಸುಮೋಟೋ ಕೇಸ್ ದಾಖಲಿಸಿ ಈತನನ್ನು ಬಂಧಿಸಿ , ನ್ಯಾಯಾಲಯಕ್ಕೆ ಹಾಜರು ಪಡಿಸಿದ್ಧರು. ಈತನಿಗೆ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.