ಡೈಲಿ ವಾರ್ತೆ: 17/ಮಾರ್ಚ್ /2025

ಕೋಟದಲ್ಲಿ ನಂದಿನಿ ಉತ್ಪನ್ನ ಮಳಿಗೆ ಶುಭಾರಂಭ

ಕೋಟ: ಕೋಟ ಪೇಟೆಯಲ್ಲಿ ಗಜಾನನ ಶೆಣೈ ಮಾಲಿಕತ್ವದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪ್ರಾಯೋಜಿತ ನಂದಿನಿ ಹಾಲಿನ ವಿವಿಧ ಉತ್ಪನ್ನ ಮಳಿಗೆಯನ್ನು ಉದ್ಯಮಿ ಆನಂದ್ ಸಿ ಕುಂದರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಆನಂದ್ ಸಿ ಕುಂದರ್ ಅವರು ಕೋಟ ಪೇಟೆಯಲ್ಲಿ ಗಜಾನನ ಶೆಣೈ ಅವರ ಮಾಲಕತ್ವದಲ್ಲಿ ಇಂದು ನಂದಿನಿ ಉತ್ಪನ್ನ ಮಳಿಗೆ ತೆರೆದಿದ್ದು. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನೀಡಲಿದ್ದಾರೆ.
ಅಲ್ಲದೆ ನಂದಿನಿ ಬ್ರ್ಯಾಂಡ್ ನ ಎಲ್ಲಾ ತರದ ಉತ್ಪನ್ನಗಳನ್ನು ಹೊಂದಿದೆ. ಇದು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಶುಭ ಹಾರೈಸಿರು.
ಈ ಸಂದರ್ಭದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಬಿ ಕುಂದರ್, ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಸತೀಶ್ ಎಚ್ ಕುಂದರ್, ಸಮಾಜಸೇವಕ ಶ್ರೀಕಾಂತ್ ಶೆಣೈ,ಗೋಪಾಲ್ ಬಂಗೇರ ಕೋಟ, ಚಂದ್ರ ಪೂಜಾರಿ, ನಾಗರಾಜ್ ಕೋಟ, ಧರ್ಮೇಂದ್ರ, ಉಮೇಶ್ ಶೆಣೈ, ನಾಗೇಂದ್ರ ಪುತ್ರನ್ ಮೊದಲದವರು ಉಪಸ್ಥಿತರಿದ್ದರು.