


ಡೈಲಿ ವಾರ್ತೆ: 31/ಮಾರ್ಚ್ /2025


ಕೋಟದಲ್ಲಿ ರಂಜಾನ್ ಅಂಗವಾಗಿ ಸೌಹಾರ್ದ ಈದ್ ಮಿಲನ: ರಂಜಾನ್ ಸೌಹಾರ್ದತೆ ಸಂಕೇತ – ಫಾದರ್ ಸ್ಟ್ಯಾನಿ ತಾವ್ರೋ

ಕೋಟ: ರಂಜಾನ್ ಹಬ್ಬ ಸೌಹಾರ್ದತೆಯ ಜತೆ ಸಾಮರಸ್ಯ ಬೆಸೆಯುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟದ ಸೈಂಟ್ ಜೋಸೇಫ್ ಚರ್ಚ್ ನ ಧರ್ಮಗುರು ಫಾದರ್ ಸ್ಟ್ಯಾನಿ ತಾವ್ರೋ ನುಡಿದರು.
ಸೋಮವಾರ ಕೋಟ ಜಾಮಿಯ ಮಸ್ಜಿದ್ ಆಶ್ರಯದಲ್ಲಿ ರಂಜಾನ್ ಅಂಗವಾಗಿ ಸೌಹಾರ್ದ ಈದ್ ಮಿಲನ ರಂಜಾನ್ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಧರ್ಮ ಧರ್ಮದ ನಡುವೆ ಸಂಬಂಧಗಳು ಗಟ್ಟಿಗೊಂಡು ಸಹಬಾಳ್ವೆ ಜೀವನ ನಡೆಸುವಂತ್ತಾಗಬೇಕು, ಮನಸ್ಸಿನ ಕಲ್ಮಶಗಳನ್ನು ಹೊರಹಾಗಿ ಹತೋಟಿಯಲ್ಲಿ ಉಪವಾಸವನ್ನು ಅರ್ಥಪೂರ್ಣಗೊಳಿಸುವ ಮುಸಲ್ಮಾನ ಬಂಧುಗಳ ಆಚರಣೆ ಬಹುಮಹತ್ವಪಡೆದುಕೊಂಡಿದೆ.ತಮ್ಮ ಧರ್ಮ ಎಲ್ಲಾ ಧರ್ಮವನ್ನು ಪ್ರೀತಿಸುವ ಜತೆಗೆ ಅವರಿಗೆ ನೆರವು ನೀಡುವ ಕಾರ್ಯ ಭಗವಂತನಿಗೆ ಸಲ್ಲಿಸುವ ಕಾರ್ಯವಾಗಿದೆ ಎಂದರು.

ಈದ್ ಸಂದೇಶವನ್ನು ಮುಸ್ಲಿಂ ಭಾಂಧವ್ಯ ವೇದಿಕೆ ಕರ್ನಾಟಕ ಸಂಚಾಲಕ ಮುಸ್ತಾಕ್ ಹೆನ್ನೆಬೈಲ್ ನೀಡಿ ಧರ್ಮಗಳು ಸಂಶೋಧನೆಗೆ ಒಳಗಾಗಬೇಕು ,ಯಾವ ಧರ್ಮವು ಹಿಂಸೆ ಒಪ್ಪುವುದಿಲ್ಲ ಆದರೆ ಸಮಾಜದಲ್ಲಿ ಶಾಂತಿಯನ್ನು ಸದಾಬಯಸುವ ಮೂಲಕ ಧರ್ಮಗಳು ಸಹಬಾಳ್ವೆ ನೀಡುವಂತ್ತಾಬೇಕು ಎಂದರಲ್ಲದೆ ಇಡೀ ವಿಶ್ವದಲ್ಲಿ ಶಾಂತಿ ಪ್ರಿಯರು ಹಿಂದೂ ಧರ್ಮದವರಾಗಿದ್ದಾರೆ, ಅಂತಹ ಸಮುದಾಯದ ನಡುವೆ ನಾವುಗಳು ರಂಜಾನ್ ಆಚರಣೆಯನ್ನು ಅರ್ಥಪೂರ್ಣ ಆಚರಿಸುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಅನಾರೋಗ್ಯ ಪೀಡಿತ ಹಿಂದೂ ಸಮುದಾಯ ಸೇರಿದಂತೆ ವಿವಿಧ ಧರ್ಮದರನ್ನು ಗುರುತಿಸಿ ಸಹಾಯಹಸ್ತ ನೀಡಲಾಯಿತು.





ಕೋಟ ಜಾಮೀಯಾ ಮಸ್ಜಿದ್ ಉಪಾಧ್ಯಕ್ಷ ವಾಹಿದ್ ಆಲಿ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್,ಕೋಟ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ,ಕೋಟ ಜಾಮೀಯಾ ಮಸ್ಜಿದ್ ಧರ್ಮಗುರು ಮೌಲಾನ ಮೋಮಿನ್ ಅಶ್ಭಕ್ ಉಪಸ್ಥಿತರಿದ್ದರು.

ಈ ಮೊದಲು ಸಾಮೂಹಿಕ ಪ್ರಾರ್ಥನೆ ನಡೆಯಿತು.
ಕಾರ್ಯಕ್ರಮವನ್ನು ಮಸ್ಜಿದ್ ಕಾರ್ಯದರ್ಶಿ ಅಬ್ದುಲ್ ಬಷೀರ್ ಸಾಹೇಬ್ ಸ್ವಾಗತಿಸಿ ನಿರೂಪಿಸಿ ,ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಸಾಹೇಬ್ ಕೋಟ ವಂದಿಸಿದರು.