ಡೈಲಿ ವಾರ್ತೆ: 25/ಜುಲೈ/2025

ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ನಟ ನಿರ್ದೇಶಕ ರಿಷಬ್ ಶೆಟ್ಟಿ ದಂಪತಿಗಳ ಭೇಟಿ. ಬಹು ನಿರೀಕ್ಷೆಯ ಕಾಂತರ ಚಾಪ್ಟರ್ 1 ಯಶಸ್ವಿಗೆ ಪ್ರಾರ್ಥನೆ

ಕುಂದಾಪುರ: ಆಷಾಡ ಮಾಸದಲ್ಲಿ ಬರುವ ಆಟಿ ಅಮಾವಾಸ್ಯೆ ಕರಾವಳಿಗರಿಗೆ ಅತೀ ದೊಡ್ಡ ವಿಶೇಷ. ಅಂದು ಸಮುದ್ರ ಸ್ನಾನ ಮಾಡಿ ಇಷ್ಟ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಪ್ಯಾನ್ ಇಂಡಿಯಾ ನಟ ನಿರ್ದೇಶಕರಾದ ರಿಷಬ್ ಶೆಟ್ಟಿ ದಂಪತಿಗಳು ಈ ಪ್ರಯುಕ್ತ ಗುರುವಾರ ಕೋಟೇಶ್ವರದ ಕೋಟಿಲಿಂಗೇಶ್ವರನ ದರ್ಶನ ಪಡೆದು ತಮ್ಮ ಮುಂದಿನ ಚಿತ್ರದ ಯಶಸ್ಸಿಗಾಗಿ ಪುಜೆ ಸಲ್ಲಿಸಿ ಪ್ರಾರ್ಥಿಸಿದರು.

ದೇವಸ್ಥಾನದ ವತಿಯಿಂದ ಕಚೇರಿ ನಿರ್ವಕರಾದ ಶ್ರೀಮತಿ ಅನುರಾಧ ಇವರು ಪ್ರಸಾದ ನೀಡಿ ಶುಭ ಹಾರೈಸಿದರು. ದೇವಳದ ನೌಕರರಾದ ವೆಂಕಟೇಶ್ ಶೇಟ್, ದೇವಸ್ಥಾನ ಸಿಬ್ಬಂದಿಗಳಾದ ಮಧುಕರ್ ಮತ್ತು ಜಗದೀಶ್ ಉಪಸ್ಥಿತರಿದ್ದರು.