


ಡೈಲಿ ವಾರ್ತೆ: 27/ಜುಲೈ/2025


ಕೋಟ| ಬಾರೀ ಗಾಳಿ, ಮಳೆಗೆ ಮನೆ ಕುಸಿತ – ಮನೆ ಮಂದಿ ಪಾರು, ಸ್ಥಳಕ್ಕೆ ಶಾಸಕ ಎ. ಕಿರಣ್ ಕೊಡ್ಗಿ ಬೇಟಿ

ಕೋಟ: ಕಳೆದ ಎರಡು ದಿನದಿಂದ ಬಾರೀ ಗಾಳಿ, ಮಳೆಯಿಂದಾಗಿ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಿಳಿಯಾರಿನ ಹರ್ತಟ್ಟು ನಿವಾಸಿ ಸೀತಾರಾಮ್ ದೇವಾಡಿಗ ಅವರ ಮನೆ ಸಂಪೂರ್ಣ ಕುಸಿದು ಬಿದ್ದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಮನೆ ಕುಸಿತದಿಂದ ಮನೆಯಲ್ಲಿ ಇದ್ದ ವಸ್ತುಗಳು ಸಂಪೂರ್ಣ ಹಾನಿಯಾಗಿದ್ದು ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಳೆಯ ಅವಘಡದಿಂದ ಮನೆ ಕಳೆದುಕೊಂಡ ಸೀತಾರಾಮ ದೇವಾಡಿಗರವರ ಕುಟುಂಬ ಬೀದಿಗೆ ಬಂದಂತಾಗಿದ್ದು. ಸ್ಥಳಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ಪರಿಶೀಲಿಸಿ ಬ್ರಹ್ಮಾವರ ತಹಶೀಲ್ದಾರರಾದ ಶ್ರೀಕಾಂತ ಹೆಗ್ಡೆ ಇವರಿಗೆ ಕರೆ ಮಾಡಿ ಪ್ರಕೃತಿ ವಿಕೋಪ ದಡಿ ತುರ್ತು ಪರಿಹಾರ ನೀಡುವ ಬಗ್ಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೋಟ ಗ್ರಾಮಲೆಕ್ಕಾಧಿಕಾರಿ ಚೆಲುವರಾಜ್, ಗ್ರಾ.ಪಂ. ಸದಸ್ಯ ಅಜಿತ್ ದೇವಾಡಿಗ, ಉಪಾಧ್ಯಕ್ಷ ಪಾಂಡು ಪೂಜಾರಿ, ಮತ್ತು ಪ್ರೇಮ ಹರೀಶ ದೇವಾಡಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಯಿತು.