ಡೈಲಿ ವಾರ್ತೆ: 15/ಅ./2025

ಕೋಟ ಗ್ರಾಮ ಪಂಚಾಯಿತಿನಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ

ಕೋಟ: ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಕೋಟ ಗ್ರಾಮ ಪಂಚಾಯತ್, ಪ್ರಸಾದ್ ನೇತ್ರಾಲಯ ಉಡುಪಿ, ಇವರ ಸಹಕಾರದೊಂದಿಗೆ ದಿನಾಂಕ 13/10/25 ರಂದು ಕೋಟ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಚಿತ ಕಣ್ಣಿನ ತಪಾಸಣೆ ನಡೆಸಿಕೊಡಲಾಯಿತು.

ಒಕ್ಕೂಟದ ಅಧ್ಯಕ್ಷರಾದ ಮಾಲತಿ ಶೇಖ‌ರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪಂಚಾಯತ್ ಕಾರ್ಯದರ್ಶಿ ಜಲಜ ಮೇಡಂ ಪ್ರಾಸ್ತವಿಕ ಮಾತುಗಳನ್ನಾಡಿದರು, LCRP ಲಲಿತ ಸ್ವಾಗತ ಕೋರಿದರು, MBK ಪ್ರೇಮ ಕಾರ್ಯಕ್ರಮ ನಿರೂಪಣೆ ಮಾಡಿದರು, LCRP ಪ್ರತಿಮಾ ವಂದನಾರ್ಪಣೆ ಮಾಡಿದರು.

ಪ್ರಸಾದ್ ನೇತ್ರಾಲಯದ ವೈದ್ಯರು ಕಣ್ಣಿನ ಆರೋಗ್ಯದ ಕುರಿತಾಗಿ ಮಾಹಿತಿ ನೀಡಿದರು, ಸಾರ್ವಜನಿಕ ಸಂಪರ್ಕಧಿಕಾರಿ ಗಣೇಶ್ ಸರ್,ಉಪಾಧ್ಯಕ್ಷರು ಜಯಲಕ್ಷ್ಮಿ, BRP-PRI ರೀತ, NRLM ಸಿಬ್ಬಂದಿ ವರ್ಗ, ಒಕ್ಕೂಟದ ಪಧಾಧಿಕಾರಿಗಳು, ಹಾಜರಿದ್ದರು, 75 ಕ್ಕೂ ಅಧಿಕ ಮಂದಿ ಕಣ್ಣಿನ ತಪಾಸಣೆ ಯಲ್ಲಿ ಭಾಗಿಯಾದರು.