ಡೈಲಿ ವಾರ್ತೆ: 24/NOV/2025

ವಂದೇ ಭಾರತ್‌ ರೈಲು ಡಿಕ್ಕಿ – ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು

ಬೆಂಗಳೂರು: ಹಳಿದಾಟುವ ವೇಳೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬಡಿದು ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಧಾನಿ ಬೆಂಗಳೂರಿನ ಚಿಕ್ಕಬಾಣಾವರ ರೈಲು ನಿಲ್ದಾಣ ಸಮೀಪ ನಡೆದಿದೆ.

ಸ್ಟೆರ್ಲಿನ್ ಎಲಿಜ (19), ಜಸ್ಟಿನ್ ಜೋಸೆಫ್ (20) ಮೃತ ವಿದ್ಯಾರ್ಥಿಗಳಾಗಿದ್ದು ಇಬ್ಬರು ಕೇರಳ ಮೂಲದವರೆಂದು ತಿಳಿದು ಬಂದಿದೆ.

ಸಪ್ತಗಿರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ ಸಿ ನರ್ಸಿಂಗ್ ಓದುತ್ತಿದ್ದ ಇಬ್ಬರೂ ತಾವಿರುವ ಪಿಜಿಗೆ ಹೋಗುವಾಗ ರೈಲ್ವೆ ಹಳಿಯ ಮೂಲಕ ಹೋಗಲು ಮುಂದಾಗಿದ್ದರು. ಈ ವೇಳೆ ಏಕಾಏಕಿ ಬಂದ ವಂದೇ ಭಾರತ್ ರೈಲಿಗೆ ಸಿಲುಕಿ ಇಬ್ಬರೂ ಧಾರುಣವಾಗಿ ಜೀವ ಕಳೆದುಕೊಂಡಿದ್ದಾರೆ.

ಯಶವಂತಪುರ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.