
ಡೈಲಿ ವಾರ್ತೆ: 25/NOV/2025
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್: ಚೆಸ್ ಪಂದ್ಯಾಟದ ಸಮಾರೋಪ ಸಮಾರಂಭ

ಬ್ರಹ್ಮಾವರ: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಮತ್ತು ಉಡುಪಿ ಜಿಲ್ಲಾ ಚೆಸ್ ಎಸೋಸಿಯೇಷನ್ ಅವರ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ರಾಜ್ಯ ಎರಡನೇ ಬಿ ಎಸ್ ಸಿ ಟ್ರೋಫಿಯ ಸಮಾರೋಪ ಸಮಾರಂಭ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಶ್ರೀಯುತ ಮೋಹನ್ ಶೆಟ್ಟಿ, ಮಾಲಕರು , ಅನಂತ ರೆಸಿಡೆನ್ಸಿ, ಉಡುಪಿ ಮತ್ತು ರೋಟೇರಿಯನ್ ಸತೀಶ್ ಶೆಟ್ಟಿ, ಅಧ್ಯಕ್ಷರು, ರೋಟರಿ ಕ್ಲಬ್, ಬ್ರಹ್ಮಾವರ , ಇವರುಗಳು ಉಪಸ್ಥಿತರಿದ್ದು, ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಟ್ರಾಫಿಗಳನ್ನು ನೀಡಿ ಶುಭಕೋರಿದರು ಹಾಗೂ ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ಬಿನ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನ ಸೂಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀಯುತ ಬಿಜು ಜಿ .ನಾಯರ್ ಅವರು ವಹಿಸಿ ಸರ್ವರನ್ನು ಸ್ವಾಗತಿಸಿದರು.
ಗೌರವಾಧ್ಯಕ್ಷರಾದ ಶ್ರೀಯುತ ಎಂ ಚಂದ್ರಶೇಖರ್ ಹೆಗ್ಡೆಯವರು ಮತ್ತು ಉಪಾಧ್ಯಕ್ಷರಾದ ಶ್ರೀಯುತ ಚಂದ್ರಶೇಖರ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು , ಶ್ರೀಯುತ ಉಮಾನಾಥ ಠಾಕೂರ್, ಅಧ್ಯಕ್ಷರು, ಉಡುಪಿ ಜಿಲ್ಲಾ ಚೆಸ್ ಎಸೋಸಿಯೇಷನ್, ಮುಖ್ಯ ತೀರ್ಪುಗಾರರಾಗಿ ಶ್ರೀಯುತ ಸಾಕ್ಷಾತ್ ಯು.ಕೆ. ಅವರುಗಳು ಉಪಸ್ಥಿತರಿದ್ದರು.
ಚಾಂಪಿಯನ್ ಆಗಿ ಶ್ರೀ ಅನಿಶ್ ಎಸ್. ಸಿ. ಉಡುಪಿ, ಮೂಡಿ ಬಂದರು. ದ್ವಿತೀಯ ಅರವಿಂದ ಬಿ .ಆರ್. ಮತ್ತು ತೃತೀಯ ಬಹುಮಾನ ಪ್ರಜ್ವಲ್ ನಾಯಕ್, ಉಡುಪಿ ಇವರು ಪಡೆದುಕೊಂಡರು. ತಂಡ ಪ್ರಶಸ್ತಿಯನ್ನು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್,ಕಾಪು, ಪ್ರಥಮ ಮತ್ತು ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ, ಬೈಂದೂರು,ಇವರು ದ್ವಿತೀಯ ಬಹುಮಾನ ಪಡೆದುಕೊಂಡರು. ಪಂದ್ಯಾಟದಲ್ಲಿ ಹಾಸನ,ಗೋವಾ,ಬೆಂಗಳೂರು ಮತ್ತು ಶಿವಮೊಗ್ಗದಿಂದ ಒಟ್ಟು 180 ಆಟಗಾರರು ಭಾಗವಹಿಸಿದ್ದರು.
ಕಾರ್ಯದರ್ಶಿಗಳಾದ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಖಜಾಂಜಿಗಳಾದ ಶ್ರೀಯುತ ವಿಕ್ರಂ ಪ್ರಭುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.