ಡೈಲಿ ವಾರ್ತೆ: 23/DEC/2025

ಕೋಟ-ಗೋಳಿಯಂಗಡಿ ಗ್ರಾಮೀಣ ಭಾಗಕ್ಕೆ ಬಂತು ಸರ್ಕಾರಿ ಬಸ್ – ಸಂಭ್ರಮಿಸಿದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು: ಶಕ್ತಿ ಯೋಜನೆಯಿಂದ ಸರಕಾರಿ ಬಸ್ಸು ಸೌಲಭ್ಯ ಹಳ್ಳಿ-ಹಳ್ಳಿಗೂ ವಿಸ್ತರಣೆಯಾಗುತ್ತಿದೆ –
ಡಾ. ಬಿ. ಪುಷ್ಪ ಅಮರನಾಥ್‌

ಕೋಟ: ಉಡುಪಿ ಜಿಲ್ಲೆಯ ಕೋಟ, ಸಾೖಬ್ರಕಟ್ಟೆ, ಮಂದಾರ್ತಿ, ಗೋಳಿಯಂಗಡಿ ಈ ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್ಸಿಗಾಗಿ ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ ಹಲವು ವರ್ಷದ ಬೇಡಿಕೆಯನ್ನು ಈಡೇರಿಸಲು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ವಡ್ಡರ್ಸೆ ಅವರ ಮನವಿಗೆ ಸ್ಪಂದಿಸಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಬಸ್ ಮಂಜೂರು ಮಾಡಿದ್ದಾರೆ.

ಡಿ.22ರಂದು ವಡ್ಡರ್ಸೆಯಲ್ಲಿ ನಡೆದ ಶಕ್ತಿ ಯೋಜನೆಯಡಿ ಸರಕಾರಿ ಬಸ್ಸು ಸೌಲಭ್ಯ ಉದ್ಘಾಟನೆ ಕಾರ್ಯಕ್ರಮದಲ್ಲಿ
ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಮೇಡಂ ಮಾತನಾಡಿ ಶಕ್ತಿ ಯೋಜನೆ ಮೂಲಕ ಮಹಿಳೆಯರು, ವಿದ್ಯಾರ್ಥಿನಿಯರಿಗೆ
ಸಾಕಷ್ಟುಅನುಕೂಲವಾಗುತ್ತಿದೆ. ಈ ಕಾರಣಕ್ಕೆ ಸರಕಾರಿ ಬಸ್ಸು ಸೌಲಭ್ಯವಿಲ್ಲದ ಹಳ್ಳಿ-ಹಳ್ಳಿಗಳಿಗೂ ಸರಕಾರಿ ಬಸ್ಸು ಬೇಡಿಕೆ ವ್ಯಕ್ತವಾಗುತ್ತಿದ್ದು ಸರಕಾರದಿಂದ ಬಸ್ಸು ಸೇವೆ ವಿಸ್ತರಣೆಯಾಗುತ್ತಿದೆ ಎಂದರು.

ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳು ಸಫಲವಾಗಿದೆ ಎನ್ನುವುದಕ್ಕೆ ನಮ್ಮ ಯೋಜನೆಯನ್ನು
ವಿರೋಧ ಪಕ್ಷಗಳು ಕೂಡ ಬೇರೆ ರಾಜ್ಯದಲ್ಲಿ ನಕಲು ಮಾಡುತ್ತಿರುವುದು ಸಾಕ್ಷಿಯಾಗಿದೆ.
ಉಡುಪಿ, ದ.ಕ. ಬುದ್ಧಿವಂತರ ಜಿಲ್ಲೆಯಾಗಿದ್ದು ಮುಂದಿನ ದಿನದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಗೌರವ ನೀಡಿ ಕಾಂಗ್ರೆಸ್‌ ಅನ್ನು ಬೆಂಬಲಿಸಬೇಕು ಎಂದು ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಮೇಡಂ ಹೇಳಿದರು.

ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಿತ್‌ ಕುಮಾರ್‌ ಶೆಟ್ಟಿ ಪ್ರಸ್ತಾವಿಕ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕೊಡವೂರು ಸರಕಾರದ ಯೋಜನೆಗಳ ಬಗ್ಗೆ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಮುಖರಾದ ಕಿಶನ್‌ ಹೆಗ್ಡೆ ಕೊಳ್ಕೆ ಬೈಲ್‌, ದಿನೇಶ್‌ ಹೆಗ್ಡೆ ಮೊಳಹಳ್ಳಿ, ಅಶೋಕ್‌ ಕುಮಾರ್‌ ಕೊಡವೂರು, ಡಾ: ಸುನೀತಾ ಶೆಟ್ಟಿ, ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷ ಲೋಕೇಶ್‌ ಕಾಂಚನ್‌, ಮಹಿಳಾ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷೆ ರೇಖಾ ಸುವರ್ಣ, ಗ್ಯಾರಂಟಿ ಸಮಿತಿ ತಾಲೂಕು ಸದಸ್ಯ ಶ್ರೀನಿವಾಸ್‌ ವಡ್ಡರ್ಸೆ, ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಚಂದ್ರ ಶೆಟ್ಟಿಯಾಳ್ಹಕ್ಲು, ಪ್ರಮುಖರಾದ ಸುಕುಮಾರ್‌
ಶೆಟ್ಟಿಕಾವಡಿ ಮೊದಲಾದವರಿದ್ದರು.