

ಡೈಲಿವಾರ್ತೆ:01/ಏಪ್ರಿಲ್ /2026


ಹೆಮ್ಮಾಡಿಯಲ್ಲಿ ಯಂಗ್ ಸ್ಟಾರ್ ವೆಲ್ಫೇರ್ ಕಮಿಟಿ ಪುನರ್‌ರಚನೆ — ಅಶ್ರಫ್ ಯೂಸುಫ್ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ: ಯಂಗ್ ಸ್ಟಾರ್ ವೆಲ್ಫೇರ್ ಕಮಿಟಿ ಹೆಮ್ಮಾಡಿ ಇದರ ಮಹಾಸಭೆ ಕುಂದಾಪುರದ ವಿನಾಯಕ ಗ್ರಾಂಡ್ ಹೋಟೆಲ್‌ನಲ್ಲಿ ಗೌರವಾಧ್ಯಕ್ಷರಾದ ಕೆ.ಎಸ್. ಇಕ್ಬಾಲ್ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಹಳೆಯ ಸಮಿತಿಯನ್ನು ರದ್ದುಗೊಳಿಸಿ, ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಅಶ್ರಫ್ ಯೂಸುಫ್, ಉಪಾಧ್ಯಕ್ಷರಾಗಿ ಇಫ್ತಾಕರ್, ಕಾರ್ಯದರ್ಶಿಯಾಗಿ ಫರಾನ್ ಹೆಮ್ಮಾಡಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಅಶಿರಾ ಹೆಮ್ಮಾಡಿ ಆಯ್ಕೆಯಾದರು. ಕೋಶಾಧಿಕಾರಿಯಾಗಿ ಮುನೀರ್ ಹೆಚ್.ಎಂ. ನೇಮಕಗೊಂಡರು.
ಇದಲ್ಲದೆ ಸದಸ್ಯರಾಗಿ ಹಾರಿಸ್ ಹೆಮ್ಮಾಡಿ, ಶಾನವಾಸ್, ಫಾರೂಕ್, ಶಫಿ ಮತ್ತು ಸುಲ್ಫಿಕಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಮಿತಿಯ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವ ನಿರ್ಧಾರ ಕೈಗೊಳ್ಳಲಾಯಿತು.