

ಡೈಲಿವಾರ್ತೆ:01/ಏಪ್ರಿಲ್ /2026


ರಾಚಮಾನಹಳ್ಳಿಯ ಶಶಿಕುಮಾರ್‌ಗೆ ಪಿಎಚ್.ಡಿ ಗೌರವ: ಗಿರೀಶ್ ಕಾರ್ನಾಡ್ ಸಿನೆಮಾ ಅಧ್ಯಯನಕ್ಕೆ ಡಾಕ್ಟರೇಟ್

ಬೆಂಗಳೂರು, ಏ.01: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಚಮಾನಹಳ್ಳಿ ಗ್ರಾಮದ ಯುವಕ ಶಶಿಕುಮಾರ್ ಪಿ. ಅವರು ಪಿಎಚ್.ಡಿ ಪದವಿ ಪಡೆದು ಊರಿಗೆ ಹೆಮ್ಮೆಯಾಗಿ ಹೊರಹೊಮ್ಮಿದ್ದಾರೆ.
ದಿವಂಗತ ಆರ್.ಎಸ್. ಪಿಲ್ಲಪ್ಪ ಮತ್ತು ಯಶೋಧಮ್ಮ ದಂಪತಿಯ ಹಿರಿಯ ಪುತ್ರರಾಗಿರುವ ಶಶಿಕುಮಾರ್ ಪಿ., ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ.
ಪ್ರಾಧ್ಯಾಪಕರಾದ ಪ್ರೊ. ಎನ್. ಸಂಜೀವ್ ರಾಜ್ ಅವರ ಮಾರ್ಗದರ್ಶನದಲ್ಲಿ “ಸಿನೆಮ್ಯಾಟಿಕ್ ಕಾನ್‌ಟ್ರಿಬ್ಯೂಷನ್ಸ್ ಆಫ್ ಡಾ. ಗಿರೀಶ್ ಕಾರ್ನಾಡ್: ಅನ್ ಅನಾಲಿಟಿಕಲ್ ಸ್ಟಡಿ” ಎಂಬ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಶಶಿಕುಮಾರ್ ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ಗುರು-ಹಿರಿಯರು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಹಾರೈಸಿದ್ದಾರೆ.