


ಡೈಲಿವಾರ್ತೆ:10/ಏಪ್ರಿಲ್ /2026

ಪಿಯುಸಿ ಫಲಿತಾಂಶ : ಸದೀದಾಗೆ 546 ಅಂಕಗಳು

ಬಂಟ್ವಾಳ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಿ ಸಿ ರೋಡು ಸಮೀಪದ ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಕೆ ಸದೀದಾ ಅವರು 546 ಅಂಕಗಳನ್ನು ಗಳಿಸುವ ಮೂಲಕ 91 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ.
ಈಕೆ ಅಮ್ಟೂರು-ಕೆದಿಲ ನಿವಾಸಿ ಅಬೂಬಕ್ಕರ್-ಆಯಿಷತುಲ್ ತ್ವಾಹಿರಾ ದಂಪತಿಯ ಪುತ್ರಿಯಾಗಿದ್ದಾಳೆ. ಈಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ 93 ಶೇಕಡಾ ಫಲಿತಾಂಶ ದಾಖಲಿಸಿದ್ದಳು.