ಡೈಲಿವಾರ್ತೆ:25/ಏಪ್ರಿಲ್ /2026

ಅಚ್ಲಾಡಿ ಸನ್ ಶೈನ್ ಉತ್ಸವಕ್ಕೆ ಕಾಮಿಡಿ ಕಿಲಾಡಿಗಳು ತಂಡ

ಕೋಟ, ಎ.25: ಸನ್ ಶೈನ್ ಗೆಳೆಯರ ಬಳಗ ರಿ. ಅಚ್ಲಾಡಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಎ.26 ರಂದು ಸಂಜೆ 7ಗಂಟೆಗೆ ಅಚ್ಲಾಡಿ ಸನ್ ಶೈನ್ ಕ್ರೀಡಾಂಗಣದಲ್ಲಿ ಜರಗಲಿದ್ದು ಕಾಮಿಡಿ ಕಿಲಾಡಿಗಳು, ಗಿಚ್ಚಿಗಿಲಿಗಿಲಿ ತಂಡದ ಭಾಗವಹಿಸಲಿದೆ.

ಈ ಪ್ರಯುಕ್ತ ಸಾಧಕರಿಗೆ ಸಮ್ಮಾನ, ಮನೋರಂಜನೆ ಕಾರ್ಯಕ್ರಮ ನಡೆಯಲಿದ್ದು ಕಾಮಿಡಿ ತಂಡದ ಹುಲಿ ಕಾರ್ತಿಕ್, ರಾಗಿಣಿ ರಾಘು, ಜಗ್ಗಪ್ಪ ಮೊದಲಾದವರಿಂದ ಕಾಮಿಡಿ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.