ಡೈಲಿವಾರ್ತೆ: 04/ಮೇ/2026

ಕೋಟ: ನೀಟ್ ಪರೀಕ್ಷೆ ಬೆನ್ನಲ್ಲೇ ವಿದ್ಯಾರ್ಥಿ ನಾಪತ್ತೆ – ಪೋಷಕರಲ್ಲಿ ಆತಂಕ​

ಕೋಟ: ನೀಟ್ (NEET) ಪರೀಕ್ಷೆ ಬರೆದ ಮರುದಿನವೇ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಗಂಭೀರ ಘಟನೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಚಿತ್ರಪಾಡಿ ಗ್ರಾಮದ ನಿವಾಸಿ ಅಭಿಷೇಕ್ ಎಸ್. ರಾಜ್ (17) ನಾಪತ್ತೆಯಾದ ವಿದ್ಯಾರ್ಥಿ.​

ಘಟನೆಯ ವಿವರ: ಅಭಿಷೇಕ್ ಕಳೆದ ಶನಿವಾರ (ಮೇ 3) ಉಡುಪಿಯಲ್ಲಿ ನೀಟ್ ಪರೀಕ್ಷೆ ಬರೆದಿದ್ದನು. ಮೇ 4ರ ಭಾನುವಾರ ಮಧ್ಯಾಹ್ನ ಸುಮಾರು 3:30 ಗಂಟೆಗೆ ಹಾಸನದಲ್ಲಿರುವ ತನ್ನ ತಾಯಿಗೆ ಕರೆ ಮಾಡಿ ನಾನು ಮಣಿಪಾಲಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದನು. ಆದರೆ ಸಂಜೆಯಾದರೂ ಆತ ಮನೆಗೆ ಮರಳದಿದ್ದಾಗ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಮನೆಯಲ್ಲಿ ಆತ ಬರೆದು ಇಟ್ಟಿದ್ದ ಪತ್ರವೊಂದು ಪತ್ತೆಯಾಗಿದ್ದು, ಅದರಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.​ ಪರೀಕ್ಷೆಯ ತೀವ್ರ ಒತ್ತಡ ಅಥವಾ ಫಲಿತಾಂಶದ ಆತಂಕದಿಂದ ಆತ ಮನೆ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಆತನ ತಂದೆ ನಟರಾಜ ಸಿ. ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.​

ನಾಪತ್ತೆಯಾದ ಹುಡುಗನ ಚಹರೆ: ​ಹೆಸರು: ಅಭಿಷೇಕ್ ಎಸ್. ರಾಜ್, 5 ಅಡಿ 9 ಇಂಚು ಎತ್ತರ, ಎಣ್ಣೆಗಪ್ಪು ​ಮೈಬಣ್ಣ, ಸಾಧಾರಣ ಶರೀರ.​ಭಾಷೆ: ಕನ್ನಡ, ಇಂಗ್ಲಿಷ್ ಮತ್ತು ಹಿಂದಿ. ಕಪ್ಪು ಬಣ್ಣದ ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ ಆತನ ಬಳಿ ಒಂದು ಟ್ರಾಲಿ ಬ್ಯಾಗ್ ಹಾಗೂ ಬೆನ್ನಿಗೆ ಹಾಕುವ ಬ್ಯಾಗ್ ಇತ್ತು.​ಪೊಲೀಸ್ ಮನವಿ: ಈ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅ.ಕ್ರ ಸಂಖ್ಯೆ 75/2026, ಕಲಂ: 137(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಚಹರೆಯುಳ್ಳ ಹುಡುಗ ಎಲ್ಲಾದರೂ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡಲು ಕೋರಲಾಗಿದೆ:​ಕೋಟ ಪೊಲೀಸ್ ಠಾಣೆ: 0820-2564155​ಬ್ರಹ್ಮಾವರ ವೃತ್ತ ನಿರೀಕ್ಷಕರು: 0820-2561966​