ಡೈಲಿವಾರ್ತೆ: 30/ಮೇ/2026

ಮೇ. 31 ರಂದು ಕೋಟದಲ್ಲಿ ಅಕ್ಷರದಕ್ಕರೆ – 2026: ಉಚಿತ ನೋಟ್ ಬುಕ್ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ

​ಕೋಟ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.), ಅಂಬೇಡ್ಕರ್ ವಾದ, ಹೋಬಳಿ ಘಟಕ ಕೋಟ (ಉಡುಪಿ ಜಿಲ್ಲೆ) ಇದರ ಆಶ್ರಯದಲ್ಲಿ 27ನೇ ವರ್ಷದ ಉಚಿತ ನೋಟ್ ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಸಂಭ್ರಮ ಹಾಗೂ ಸಭಾ ಕಾರ್ಯಕ್ರಮ ‘ಅಕ್ಷರದಕ್ಕರೆ – 2026’ ಮೇ 31ರ ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕೋಟದ ಬಿ.ಸಿ. ಹೊಳ್ಳ ಸಹಕಾರ ಸಭಾಭವನ (ಸಿ.ಎ ಬ್ಯಾಂಕ್) ದಲ್ಲಿ ಜರುಗಲಿದೆ.

​ಕಾರ್ಯಕ್ರಮದ ಉದ್ಘಾಟನೆ:
2026ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಸಾಧಕ ವಿದ್ಯಾರ್ಥಿ ಶ್ರೀ ಪ್ರೀತಮ್ ಜಿ ಪೂಜಾರಿ ಮತ್ತು ದೆಹಲಿಯ ಸಂಸತ್ ಭವನದಲ್ಲಿ ಅಂಬೇಡ್ಕರ್ ಜಯಂತಿಯಂದು ಭಾಷಣ ಮಾಡಿ ಗಮನ ಸೆಳೆದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ವಿದ್ಯಾರ್ಥಿನಿ ಕು. ಮಹಾಲಕ್ಷ್ಮಿ ಸಿ. ಜಿ. ಅವರು ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

​ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಮುಖ್ಯ ಅತಿಥಿಗಳು


ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರದ ಉದ್ಯಮಿ ಶ್ರೀ ಮೊಳಹಳ್ಳಿ ದಿನೇಶ್ ಹೆಗ್ಡೆ ಹಾಗೂ ಕೋಟ ಸಬ್ ಇನ್ಸ್ಪೆಕ್ಟರ್ ಶ್ರೀ ಪ್ರವೀಣ್ ಕುಮಾರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ.

ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಡಾ. ಕೃಷ್ಣ ಕಾಂಚನ್, ದ.ಸಂ.ಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ರೀ ಶ್ಯಾಮ್ರಾಜ್ ಬಿರ್ತಿ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಜಿ. ತಿಮ್ಮ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

​ವಿಶೇಷ ವಿತರಣೆ ಮತ್ತು ಪುರಸ್ಕಾರ:
ಗೀತಾನಂದ ಫೌಂಡೇಶನ್ ಕೋಟದ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಹಾಗೂ ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಖ್ಯಾತ ಮನೋವೈದ್ಯರಾದ ಡಾ. ಪ್ರಕಾಶ್ ಸಿ. ತೋಳಾರ್ ಅವರ ಸಮ್ಮುಖದಲ್ಲಿ ಪ್ರತಿಭಾ ಪುರಸ್ಕಾರ ನಡೆಯಲಿದೆ. ದ.ಸಂ.ಸ (ರಿ.) ಅಂಬೇಡ್ಕರ್ ವಾದದ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಸುಂದರ ಮಾಸ್ಟರ್ ಅವರು ಉಚಿತ ನೋಟ್ ಬುಕ್ ವಿತರಣೆ ಮಾಡಲಿದ್ದಾರೆ.

​ಗೌರವ ಉಪಸ್ಥಿತಿಯಲ್ಲಿ
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ಶ್ರೀಮತಿ ವಸಂತಿ ಶಿವಾನಂದ್, ಗಣಪತಿ ಜೂನಿಯರ್ ಕಾಲೇಜು ಮಂಗಳೂರಿನ ಪ್ರಾಂಶುಪಾಲರಾದ ಶ್ರೀ ರತ್ನಾಕರ ಬನ್ನಾಡಿ, ವಿವೇಕ ಪೂರ್ವ ಪ್ರಾಥಮಿಕ ಕಾಲೇಜಿನ ಉಪನ್ಯಾಸಕರಾದ ಶ್ರೀ ಸಂಜೀವ ಸಿ. ಗುಂಡ್ಮಿ, ವಿವೇಕ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪ್ರೇಮಾನಂದ ಬಾರ್ಕೂರು ಸೇರಿದಂತೆ ದಲಿತ ಸಂಘರ್ಷ ಸಮಿತಿಯ ವಿವಿಧ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿರಲಿದ್ದಾರೆ.

ಕೋಟ ಹೋಬಳಿ ಶಾಖೆಯ ಸಂಚಾಲಕರಾದ ಶ್ರೀ ನಾಗರಾಜ ಪಡುಕರೆ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ ಟಿ. ಮಂಜುನಾಥ ಗಿಳಿಯಾರು ಪ್ರಸ್ತಾವನೆಗೈದರೆ, ತಾಲೂಕು ಪ್ರಧಾನ ಸಂಚಾಲಕರಾದ ಶ್ರೀ ಶ್ಯಾಮ್ ಸುಂದರ್ ತೆಕ್ಕಟ್ಟೆ ಸ್ವಾಗತಿಸಲಿದ್ದಾರೆ. ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಕುಮಾರ್ ಕೋಟ ಧನ್ಯವಾದ ಸಮರ್ಪಿಸಲಿದ್ದಾರೆ. ಶ್ರೀ ಪ್ರಭಾಕರ ಪಡುಕರೆ ಮತ್ತು ಶ್ರೀಮತಿ ಚೈತ್ರ ಬೈಂದೂರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
​ಅಖಿಲ ಕರ್ನಾಟಕ ಬಂಟರ ಸಮಾಜ (ರಿ.) ಕೋಟ ಹಾಗೂ ಡಾ| ಬಿ.ಆರ್. ಅಂಬೇಡ್ಕರ್ ಜನಶಿಕ್ಷಣ ಟ್ರಸ್ಟ್ (ರಿ.) ಕೋಟ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿತವಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋಟ ಹೋಬಳಿ ಶಾಖೆಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.