ಡೈಲಿವಾರ್ತೆ: 19/ಜು./2026

ನೆಹರುನಗರ : ಮಹಿಳಾ ಯಾತ್ರಿಕರ ನಮಾಝ್ ಕೊಠಡಿ ಹಾಗೂ ಉಸ್ತಾದರ ವಾಸ್ತವ್ಯ ಕಟ್ಟಡ ಉದ್ಘಾಟನೆ

ಬಂಟ್ವಾಳ : ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಅಧೀನದ ನೆಹರುನಗರ ಬದ್ರಿಯಾ ಜುಮಾ ಮಸೀದಿ ಬಳಿ ಮರ್ಹೂಮ್ ನಸೀಮಾ ಬಾನು ಸ್ಮರಣಾರ್ಥ ನಿರ್ಮಿಸಲಾದ ಮಹಿಳಾ ಯಾತ್ರಿಕರ ನಮಾಝ್ ಕೊಠಡಿ ಹಾಗೂ ಮದ್ರಸ ಉಸ್ತಾದರ ವಾಸ್ತವ್ಯದ ಕಟ್ಟಡ ಶುಕ್ರವಾರ ಉದ್ಘಾಟನೆಗೊಂಡಿತು.

ಮಹಿಳಾ ಯಾತ್ರಿಕರ ನಮಾಝ್ ಕೊಠಡಿಯನ್ನು ಉದ್ಘಾಟಿಸಿದ ಸಯ್ಯಿದ್ ಕೆ.ಎಸ್.ಶಮೀಮ್ ತಂಙಳ್ ಕುಂಬೋಳ್ ದು:ಹಾ ಆಶೀರ್ವಚನಗೈದರು. ಮಸೀದಿ ಕಛೇರಿಯನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದಾನ ಧರ್ಮವು ಮನುಷ್ಯನನ್ನು ಇಹಪರ ವಿಜಯದತ್ತ ಕೊಂಡೊಯ್ಯುವ ಸಾಧನವಾಗಿದೆ, ಸಮಾಜದಿಂದ ಗಳಿಸಿದರ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಿದಾಗ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಕಟ್ಟಡವನ್ನು ಕಟ್ಟಿಸಿಕೊಟ್ಟ ಮೊಹಮ್ಮದ್ ನಿಯಾಝ್ ಅವರ ಕಾರ್ಯ ಶ್ಲಾಘನೀಯ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ, ದ.ಕ, ಉಡುಪಿ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮದ್ರಸ ಉಸ್ತಾದರ ವಾಸ್ತವ್ಯದ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಬಿ.ವೈ. ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಿದ್ದರು

ಕಾರ್ಯಕ್ರಮದಲ್ಲಿ ನೆಹರು ನಗರ ಜುಮಾ ಮಸೀದಿ ಖತೀಬ್ ದಾವುದ್ ಇಸ್ಮಾಯಿಲ್ ಪೈಝಿ, ಎನ್.ಎಚ್. ಆದಂ ಫೈಝಿ, ಅಕ್ಕರಂಗಡಿ ದಾರುಲ್ ಇಸ್ಲಾಂ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ಹಮೀದ್ ಮಾಣಿ, ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಹಾಜಿ ಸೈಫುದ್ದೀನ್ ಮೊಹಮ್ಮದ್ ನಝರ್, ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಚ್. ಅಬೂಬಕ್ಕರ್ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದರು.

ಪಿ.ಜೆ. ಅಬ್ದುಲ್ ಹಮೀದ್ ನಝರ್, ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಙಿ,
ಎಚ್.ಐ.ಎಂ.ಮದರಸ ಮುಖ್ಯ ಶಿಕ್ಷಕ ಹನೀಫ್ ಮುಸ್ಲಿಯರ್, ನೆಹರು ನಗರ ಬದ್ರಿಯಾ ಮದರಸ ಮುಖ್ಯ ಶಿಕ್ಷಕ ರಶೀದ್ ಹನಿಫೀ, ನರಿಕೊಂಬು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಿಯಾಝ್ ನೆಹರುನಗರ, ಪ್ರಮುಖರಾದ ಎಚ್.ಎಚ್. ಅಫೀಝ್, ಪಿ.ಎಂ. ಇಕ್ಬಾಲ್, ಪಿ.ಎಸ್. ಅಹಮದ್ ಬಶೀರ್, ಹಾಜಿ ಆದಂ, ಅಬ್ದುಲ್ ಸಲೀಂ, ಹಸನ್ ಹಾಜಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು. .

ಇದೇ ವೇಳೆ ದಾನಿ ಮ್ಯಾನ್ & ಮೋಡ ಇದರ ಮಾಲೀಕ ಮೊಹಮ್ಮದ್ ನಿಯಾಝ್ ಹಾಗೂ ಸೆಂಟ್ರಿಕ್ ಬಿಲ್ಡರ್ ನ
ಇಮ್ಮಿಯಾಝ್ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.

ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಜುಬೇರ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮಸೀದಿ ಉಪಾಧ್ಯಕ್ಷ ತಸ್ಲೀಮ್ ಆರೀಫ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಿ.ಜೆ. ವಂದಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.