


ಡೈಲಿವಾರ್ತೆ: 18/ಜು./2026


ಗೀಸರ್ ಗೆ ಅಳವಡಿಸಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ: ಮೂವರಿಗೆ ಗಾಯ!

ಧಾರವಾಡ: ಗ್ಯಾಸ್ ಗೀಸರ್ ಗೆ ಅಳವಡಿಸಿದ್ದ ಸಿಲಿಂಡರ್ ಸ್ಪೋಟಗೊಂಡು ಮೂವರು ಗಾಯಗೊಂಡ ಘಟನೆ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಸಂಭವಿಸಿದೆ.
ಗಾಯಗಂಡವರನ್ನು ಸಾಯಿರಬಾನು(54) ಇವರ ಮಕ್ಕಳಾದ ಅಬ್ಬಾಸ್ ಅಲಿ(29) ಮತ್ತು ಹಸನ್ ( 26)ಎಂದು ಗುರುತಿಸಲಾಗಿದೆ.
ಘಟನೆ ವಿವರ:
ಜುಲೈ 18 ರಂದು ಶನಿವಾರ ಮುಂಜಾನೆ ಮನೆಯಲ್ಲಿ ಗ್ಯಾಸ್ ಸೋರಿಕೆಯ ವಾಸನೆ ಬರುತ್ತಿದ್ದು ಇದನ್ನು ಗಮನಿಸಿದ್ದ ಮನೆಯ ಮಾಲೀಕ ಅಲ್ಲಾಬಕ್ಷ್ ಬೇರೆ ಕಡೆ ಗ್ಯಾಸ್ ಲೀಕ್ ಆಗಿರಬಹುದು ಎಂದು ತಿಳಿದು ನಮಾಜ್ ಗೆ ಹೋಗಿದ್ದರು.
ಅಷ್ಟರಲ್ಲಿ ಮನೆಯಲ್ಲಿದ್ದ ಒಬ್ಬ ಮಗ ಲೈಟ್ ಹಾಕಿದ್ದರಿಂದ ತಕ್ಷಣ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಸಿಲಿಂಡರ್ ಬ್ಲಾಸ್ಟ್ ಆದ ಪರಿಣಾಮ ಮನೆಯಲ್ಲಿದ್ದ ತಾಯಿ ಹಾಗೂ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಸ್ಥಳೀಯರು ಸೇರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದ ಮನೆಯ ಒಂದು ಗೋಡೆ ಒಡೆದು ಹೋಗಿದ್ದು ಮನೆಯ ಸಾಮಾನು ಎಲ್ಲಾ ಚೆಲ್ಲಾಪಿಲ್ಲಿಯಾಗಿದೆ.
ಸ್ಥಳಕ್ಕೆ ಅಣ್ಣೆಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.