ಡೈಲಿವಾರ್ತೆ: 30/ಮೇ/2026

ಕೋಟೇಶ್ವರ ಗಾಣಿಗ ಯುವ ಸಂಘಟನೆ: ವಲಯ ಸಮಾವೇಶ ಉದ್ಘಾಟನೆ

ಕೋಟ: ಸಂಘಟನೆಯ ಮೂಲಕ ಯುವ ಜನತೆ ಸಮಾಜ ಸೇವೆಯನ್ನು ನಿರಂತರವಾಗಿ ಹದಿನೈದು ವರ್ಷಗಳ ಕಾಲ ಮುನ್ನೆಡೆಸಿಕೊಂಡು ಬಂದಿರುವುದು ಸಾಧನೆಯೇ ಸರಿ. ಯುವಜನತೆ ಒಗ್ಗೂಡಿದಾಗ ಏನನ್ನು ಸಹ ಸಾಧಿಸಲು ಸಾಧ್ಯ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಸತೀಶ್ ಗಾಣಿಗ ಹೇಳಿದರು.


ಅವರು ಭಾನುವಾರ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ ಮತ್ತು ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಕುಂದಾಪುರ ವ್ಯಾಸರಾಜ ಮಠದ ಶ್ರೀ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಕಲ್ಯಾಣ ಮಂಟಪದಲ್ಲಿ ನಡೆದ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ೧೫ನೇ ವರ್ಷದ ಪ್ರಯುಕ್ತ ವಲಯ ಸಮಾವೇಶ, ಕೋಟೇಶ್ವರ ಘಟಕ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತ ನೋಡ್ಸ್ ಪುಸ್ತಕ, ಕೊಡೆ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುರೇಂದ್ರ ಶೆಟ್ಟಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಗಾಣಿಗ ಸಮುದಾಯ ಬಹಳ ಸುಸಂಸ್ಕೃತ, ಸಜ್ಜನಿಕೆಯ ಸಮುದಾಯವಾಗಿದ್ದು, ಸಂಘಟನೆಯ ಮೂಲಕ ಸಮಾಜವನ್ನು ಮುನ್ನೆಡೆಸುವ ಎಲ್ಲಾ ಯುವಕರು ಅಭಿನಂದನೆಗೆ ಅರ್ಹರು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಬಿ.ಜಿ ನಾಗರಾಜ ವಹಿಸಿದ್ದರು.
ಧಾರ್ಮಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ಉದಯ ಕುಮಾರ್ ಶುಭಹಾರೈಸಿದರು.


ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಕರುಣಾಕರ ಗಾಣಿಗ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ, ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಪ್ರಥ್ವಿರಾಜ್ ಆರ್.ಗಾಣಿಗ, ಅವನಿಕ ಜಿ., ರಿಧಿಮಾ ಬಿ.ಆರ್, ಘಟಕ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಮಾಜಿ ಸದಸ್ಯರಾದ ಲಕ್ಷಿö್ಮÃ ಗಾಣಿಗ, ಪಾರ್ವತಿ ಗಾಣಿಗ, ಶಂಕರನಾರಾಯಣ ಗಾಣಿಗ, ಪ್ರಭಾವತಿ ಗಾಣಿಗ, ಜಯಂತಿ ಗಾಣಿಗ, ಮಂಜುಳಾ ಗಾಣಿಗ, ಪ್ರಭಾಕರ ಬಿ.ಕುಂಭಾಶಿ, ಹರೀಶ್ ಗಾಣಿಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಸವಿತಾ ಗಾಣಿಗ ಉಪಸ್ಥಿತರಿದ್ದರು. ಮಂಜುನಾಥ್ ಕೆ.ಎಸ್ ಸ್ವಾಗತಿಸಿದರು. ಕಲಾವತಿ ಗಾಣಿಗ ಪ್ರಾರ್ಥಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಣೂತ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಘಟಕದ ಮಹಿಳಾ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಲಯ ಸಮಾವೇಶದಲ್ಲಿ ಆಲಂದೂರು ಮಂಜುನಾಥ್ ಆರೋಗ್ಯ ಸಮಸ್ಯೆ- ಸರಕಾರಿ ಸೌಲಭ್ಯ, ಗಣೇಶ್ ಚೆಲ್ಲಿಮಕ್ಕಿ ಶೈಕ್ಷಣಿಕ ಸಹಾಯಧನ, ನರೇಂದ್ರ ಕುಮಾರ್ ಕೋಟ ಸಂಘಟನೆಯಲ್ಲಿನ ಸವಾಲುಗಳ ಕುರಿತು ಗೋಷ್ಟಿ ಮಂಡನೆ ಮಾಡಿದರು. ಶಿಕ್ಷಕ ಶೇಖರ ಗಾಣಿಗ ಬೀಜಮಕ್ಕಿ ಸಮನ್ವಯಗಾರರಾಗಿದ್ದರು. ತದನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕುಂದಾಪುರ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ ಗಾಣಿಗ, ಯುವ ನಿರೂಪಕ ಪ್ರಣೂತ್ ಆರ್. ಗಾಣಿಗರ ಜತೆ ಪತ್ರಕರ್ತ ರಾಜೇಶ್ ಗಾಣಿಗ ಅಚ್ಲಾಡಿ ಸಂವಾದ ನಡೆಸಿಕೊಟ್ಟರು.

ಕೋಟೇಶ್ವರ ಗಾಣಿಗ ಯುವ ಸಂಘಟನೆ: ಉಚಿತ ನೋಟ್ಸ್ ಪುಸ್ತಕ,ಕೊಡೆ ವಿತರಣೆ: ಕೋಟೇಶ್ವರ: ಸಮಾಜ ಅಭಿವೃದ್ದಿಯಲ್ಲಿ ಯುವ ಸಂಘಟನೆಯ ಕೊಡುಗೆ ದೊಡ್ಡದು. ಯುವ ಜನತೆ ಒಗ್ಗಟ್ಟಗಾಗಿ ಕಾರ್ಯ ನಿರ್ವಹಿಸಿದಾಗ ಸಮಾಜ ಸಂಘಟಿತವಾಗಿ ಮುನ್ನಡೆಯಲು ಸಾಧ್ಯ ಎಂದು ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜಿ ಉಪ್ಪುಂದ ಹೇಳಿದರು.
ಅವರು ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ ಮತ್ತು ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಕುಂದಾಪುರ ವ್ಯಾಸರಾಜ ಮಠದ ಶ್ರೀ ವೇಣುಗೋಪಾಲಕೃಷ್ಣ ಹವಾನಿಯಂತ್ರಿತ ಕಲ್ಯಾಣ ಮಂಟಪದಲ್ಲಿ ನಡೆದ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ೧೫ನೇ ವರ್ಷದ ಸಂಭ್ರಮದ ಪ್ರಯುಕ್ತ ಕೋಟೇಶ್ವರ ಘಟಕ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಉಚಿತ ನೋಡ್ಸ್ ಪುಸ್ತಕ, ಕೊಡೆ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ,ಕೊಡೆ ವಿತರಿಸಿ ಮಾತನಾಡಿದರು.

ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಸತೀಶ್ ಗಾಣಿಗ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಬಿ.ಜಿ ನಾಗರಾಜ ವಹಿಸಿದ್ದರು. ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಾಣಿಗ ಆನಗಳ್ಳಿ, ಕೋಶಾಧಿಕಾರಿ ಎಚ್.ಎಸ್.ಗಾಣಿಗ, ಉದ್ಯಮಿ ಗಣೇಶ್ ಗಾಣಿಗ ಉಪ್ಪುಂದ ಶುಭ ಹಾರೈಸಿದರು. ವೇದಿಕೆಯಲ್ಲಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಸವಿತಾ ಗಾಣಿಗ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಪ್ರಥಾನ ಕಾರ್ಯದರ್ಶಿ ಚಂದ್ರಶೇಖರ ಬೀಜಾಡಿ, ಯುವ ನಿರೂಪಕ ಪ್ರಣೂತ್ ಆರ್.ಗಾಣಿಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡ್ರಾ ಮೂಲಕ ನಡೆದ ಅದೃಷ್ಠವಂತರ ಆಯ್ಕೆಯಲ್ಲಿ ಚಿನ್ನದ ನಾಣ್ಯವನ್ನು ಉಷಾ ಕನ್ನುಕರೆ ಪಡೆದುಕೊಂಡರೇ,ಬೆಳ್ಳಿಯ ನಾಣ್ಯವನ್ನು ಜಗನ್ನಾಥ ಗಾಣಿಗ ಬೀಜಾಡಿ ಪಡೆದುಕೊಂಡರು. ಯುವ ಸಂಘಟನೆಯ ಗೌರವಾಧ್ಯಕ್ಷ ಸುಧಾಕರ ಗಾಣಿಗ ಕುಂಭಾಶಿ, ಪ್ರಧಾನ ಕಾರ್ಯದರ್ಶಿ ಮಹೇಶ್ ಗಾಣಿಗ, ಮಾಜಿ ಅಧ್ಯಕ್ಷ ಉದಯ ಗಾಣಿಗ, ಮಹಿಳಾ ಸಂಘಟನೆಯ ಕಾರ್ಯದರ್ಶಿ ವೀಣಾ ರಾವ್, ಕೋಶಾಧಿಕಾರಿ ನೇತ್ರಾವತಿ ಮೊದಲಾದವರು ಸಹಕರಿಸಿದರು. ಮಂಜುನಾಥ್ ಕೆ.ಎಸ್ ಸ್ವಾಗತಿಸಿದರು. ಮಹಿಳಾ ಸಂಘಟನೆಯ ಗೌರವಾಧ್ಯಕ್ಷೆ ಕಲಾವತಿ ಗಾಣಿಗ ವಂದಿಸಿದರು.