



ಡೈಲಿವಾರ್ತೆ: 31/ಮೇ/2026


ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ಜಲಸಮಾಧಿಯಾದ ಐವರು: ಮೂವರ ಶವ ಪತ್ತೆ, ಮುಂದುವರಿದ ಶೋಧಕಾರ್ಯ

ರಾಯಚೂರು: ಆಂಧ್ರಪ್ರದೇಶದ ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ನಿನ್ನೆ ಈಜಲು ತೆರಳಿದ್ದ ಐವರು ನೀರುಪಾಲಾದ ಪ್ರಕರಣದಲ್ಲಿ ಇದುವರೆಗೆ ಮೂವರ ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಹೈದರಾಬಾದ್ ಮೂಲದ ತಂದೆ ಮಗನ ಮೃತ ದೇಹಗಳು ಪತ್ತೆಯಾಗಿವೆ. ತಂದೆ ಸತೀಶ್ (35), ಮಗ ಯಮನ ಚಂದ್ರ (5) ಮೃತರು. ನಿನ್ನೆ ಧನುಷ್ (23) ಮೃತದೇಹ ಪತ್ತೆಯಾಗಿತ್ತು. ಇನ್ನೂ ರಾಘವೇಂದ್ರ (25), ಸಂಧ್ಯಾ (23) ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ಆಂಧ್ರಪ್ರದೇಶ SDRF, ಪೊಲೀಸರು, ಮೀನುಗಾರರಿಂದ ಶೋಧಕಾರ್ಯ ನಡೆದಿದೆ.
ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದವರು, ಪೂಜೆಯ ಬಳಿಕ ನದಿಯಲ್ಲಿ ಈಜಲು ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ.