



ಡೈಲಿವಾರ್ತೆ: 05/ಜೂ./2026


ಬಂಟ್ವಾಳ ಮೂಲದ ವ್ಯಕ್ತಿ ಕುವೈಟ್ ನಲ್ಲಿ ಹೃದಯಾಘತದಿಂದ ಮೃತ್ಯು

ಬಂಟ್ವಾಳ: ಕುವೈಟ್ ದೇಶದಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳ ಮೂಲದ ವ್ಯಕ್ತಿಯೊಬ್ಬರು ಹೃದಯಾಘತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಬಂಟ್ವಾಳ ತಾಲ್ಲೂಕಿನ ತಲಪಾಡಿ ನಿವಾಸಿ ಅಬ್ದುಲ್ ರಝಕ್ ವಳಚ್ಚಿಲ್ (58) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಇವರು ಮೂಲತಃ ವಳಚ್ಚಿಲ್ ನಿವಾಸಿಯಾಗಿದ್ದು, ತಲಪಾಡಿಯಲ್ಲಿ ಸ್ವಂತ ಮನೆಮಾಡಿ ನೆಲೆಸಿದ್ದರು. ಹತ್ತಾರು ವರ್ಷಗಳಿಂದ ಕುವೈಟ್ ದೇಶದ ಫರ್ವಾನಿಯ ಎಂಬಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಅವರು ಬುಧವಾರವೂ ಕೆಲಸ ಮಾಡುವಾಗ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಗೆ ಸಾಗಿಸುವಾಗ ದಾರಿಯ ಮಧ್ಯೆಮೃತಪಟ್ಟಿರುವುವುದಾಗಿ ಕುಟುಂಬಿಕರು ತಿಳಿಸಿದ್ದಾರೆ.
ಮೃತದೇಹವನ್ನು ಊರಿಗೆ ತರುವ ನಿಟ್ಟಿನಲ್ಲಿ ಎಲ್ಲಾ ಕೆಲಸ-ಕಾರ್ಯಗಳು ನಡೆಯುತ್ತಿದ್ದು, ವಿಮಾನದ ಮೂಲಕ ಗುರುವಾರ ತಡರಾತ್ರಿ ರಾತ್ರಿ ಬೆಂಗಳೂರಿಗೆ ತಲುಪಲಿದೆ. ಅಲ್ಲಿಂದ ಆಂಬುಲೆನ್ಸ್ ಮೂಲಕ ಶುಕ್ರವಾರ ಬೆಳಿಗ್ಗೆ ಊರಿಗೆ ತಲುಪುವ ನಿರೀಕ್ಷೆ ಇದೆ. ಬಳಿಕ ತಲಪಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಜನಾಝ ನಮಾಜ್ ಬಳಿಕ, ಮೊಫತ್ ಲಾಲ್ ದಫನ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಕಾಲಿಕ ಮರಣಕ್ಕೆ ತಲಪಾಡಿ ಆಡಳಿತ ಮಂಡಳಿ ಹಾಗೂ ಅಲ್ ರಹ್ಮಾ ಫೌಂಡೇಶನ್ ಸಂತಾಪ ಸೂಚಿಸಿದೆ.