


ಡೈಲಿವಾರ್ತೆ: 24/ಜು./2026


ಸಮಾಜಮುಖಿ ಚಿಂತನೆಯೊಂದಿಗೆ ಜನ್ಮದಿನ ಆಚರಣೆ; ಡಾ. ಬಸವರಾಜ ಬಳ್ಳಾರಿಗೆ ವ್ಯಾಪಕ ಅಭಿನಂದನೆ

ಬಳ್ಳಾರಿ: ಡಾ ಬಸವರಾಜ ಬಳ್ಳಾರಿ, ರಾಜ್ಯ ಉಪಾಧ್ಯಕ್ಷರು ಕ ರಾ ಸ ನೌಕರರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಅಧ್ಯಕ್ಷರು ಗದಗ ಇವರ 49 ನೇ ಹುಟ್ಟುಹಬ್ಬ ಆಚರಿಸಿಕೊಂಡರು ಸಾರ್ಥಕತೆಯ ಮಾದರಿಯಾದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಗದಗ ದಲ್ಲಿ ನಡೆದ ಜನ್ಮದಿನಾಚರಣೆ ಸಮಾರಂಭ ಅದ್ಧೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ ಬಸವರಾಜ ಬಳ್ಳಾರಿ ನೀವೆಲ್ಲಾ ಪಾಲ್ಗೊಂಡಿದ್ದು ನನ್ನ ಸೌಭಾಗ್ಯ. ನಿಮ್ಮೆಲ್ಲರ ಶ್ರೀರಕ್ಷೆ ಹಾರೈಕೆ ಸದಾ ನನ್ನ ಹಾಗೂ ಕುಟುಂಬದ ಮೇಲಿರಲಿ ಎಂದರು.
ಈ ಸಂದರ್ಭದಲ್ಲಿ ಅವರು ಗದಗ ಜಿಲ್ಲೆಯ ಪ್ರತಿ ತಾಲೂಕಿನ ಮಾಜಿ ಸೈನಿಕರಿಗೆ, ಪ್ರಗತಿಪರ ರೈತರಿಗೆ, ಮಹಿಳಾ ಸಾಧಕರಿಗೆ, ಅತ್ಯುತ್ತಮ ಶಿಕ್ಷಕ ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ, ಕಲಾವಿದರಿಗೆ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಟಾಪರ್ಸ ಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದಕ್ಕೆ ಜಿಲ್ಲೆಯ ಎಲ್ಲಾ ನೌಕರ ಬಾಂಧವರು ಅಭಿನಂದನೆಗಳನ್ನು ಸಲ್ಲಿಸಿದರು.


ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಅಧ್ಯಕ್ಷರಾದ ಗುರುರಾಜ ಹವಳದ ತಾಲೂಕಿನ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವೇದಿಕೆಯಲ್ಲಿದ್ದ ಗಣ್ಯರ ಸಮಕ್ಷಮ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕ ರಾ ಸ ನೌಕರರ ಸಂಘ ಲಕ್ಷ್ಮೆಶ್ವರ ಅಧ್ಯಕ್ಷ ಗುರುರಾಜ ಹವಳಧ,ಕಾರ್ಯದರ್ಶಿ ಎಂ ಎ ನದಾಫ, ಖಜಾಂಚಿ ಎಂ ಡಿ ವಾರದ, ಬಸವರಾಜ ಯರಗುಪ್ಪಿ, ಶ್ರೀಕಾಂತ ಬಾಲೆಹೊಸೂರ, ಮಂಜುನಾಥ ಕೊಕ್ಕರಗುಂದಿ, ಡಿ ಎಚ್ ಪಾಟೀಲ, ಶ್ರೀಮತಿ ಎಲ್ ಎನ್ ನಂದೆಣ್ಣವರ, ಎಂ ಎಸ್ ಹಿರೇಮಠ, ಬಸವರಾಜ ಹರಲಾಪುರ, ಚಂದ್ರು ನೇಕಾರ, ಬಸವರಾಜ ಯತ್ನಳ್ಳಿ, ಎಂ ಎನ್ ಭರಮಗೌಡ್ರ, ಶ್ರೀಕಾಂತ ನಂದೆಣ್ಣವರ ಮುಂತಾದವರು ಹಾಜರಿದ್ದರು.