



ಡೈಲಿವಾರ್ತೆ: 07/ಜೂ./2026


ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಗಂಗೊಳ್ಳಿ: ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆ, ಇಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಧರ್ಮಭಗಿನಿ ವಿಜಯ ಅವರು ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ, ಪರಿಸರ ಉಳಿಸಿದರೆ ಮಾತ್ರ ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯ. ಪ್ರತಿಯೊಬ್ಬರು ಗಿಡವನ್ನು ನೆಟ್ಟು ಬೆಳೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮೆಲ್ ಸಂಸ್ಥೆಯ ಮುಖ್ಯಸ್ಥೆ ಧರ್ಮಬಗಿನಿ ಗ್ರೇಸಿ ಲೋಬೊ, ಉಪ ಮುಖ್ಯಶಿಕ್ಷಕಿ ಧರ್ಮಬಗಿನಿ ಸವಿತಾ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಗೀತಾ ಉಸ್ತುವಾರಿಯನ್ನು ವಹಿಸಿದರು. ಶಾಲಾ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.