ಡೈಲಿವಾರ್ತೆ:26/ಅ./2026

ಯುವಕ ನಾಪತ್ತೆ, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ : ಕೆಲಸಕ್ಕೆಂದು ಕೇರಳಕ್ಕೆ ತೆರಳಿದ ಯುವಕ ನಾಪತ್ತೆಯಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವಕನನ್ನು ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ ಸಂತೋಷ್ (27) ಎಂದು ಗುರುತಿಸಲಾಗಿದೆ.

ಈತ ಕೆಂಪು ಕಲ್ಲಿನ ಲಾರಿಗಳಲ್ಲಿ ಲೋಡರ್ ಆಗಿ ಕೆಲಸ ಮಾಡುತ್ತಿದ್ದು, 2026 ಮೇ 01 ರಂದು ಬೆಳಿಗ್ಗೆ ಸುಮಾರು 8.30 ಗಂಟೆಗೆ ಕೇರಳದ ಕಡೆಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಿಂದ ಹೊರಟಿದ್ದು, ಅಂದಿನಿಂದ ಮನೆಗೆ ಬಂದಿಲ್ಲ. ಅಷ್ಟಮಿಯ ಸಮಯ ಅಂದರೆ 2 ತಿಂಗಳು ಬಿಟ್ಟು ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಮನೆಯಿಂದ ಹೋದ ನಂತರ ನಮಗೆ ಯಾರಿಗೂ ಆತನು ಫೋನ್ ಕರೆ ಕೂಡ ಮಾಡಿರುವುದಿಲ್ಲ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಠಾಣಾ ಅ.ಕ್ರ 133/2026 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಸಂತೋಷ್ ನಿಗೆ 27 ವರ್ಷ ವಯಸ್ಸು 6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, 10ನೇ ತರಗತಿ ವಿದ್ಯಾಬ್ಯಾಸ ಪಡೆದಿದ್ದು, ಕನ್ನಡ, ತುಳು, , ಮಲೆಯಾಳಂ ಮಾತನಾಡುತ್ತಾರೆ ಮತ್ತು ಬಲ ತೊಡೆಯಲ್ಲಿ ಆಪರೇಷನ್ ಆದ ಗಾಯದ ಗುರುತು ಇರುತ್ತದೆ.

ಸದ್ರಿ ಕಾಣೆಯಾದ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ, ಪೊಲೀಸ್ ನಿಯಂತ್ರಣ ಕೊಠಡಿ, ಅಥವಾ 08255-232111, 9480805367,
0824-9480805300 ಈ ದೂರವಾಣಿ ನಂಬರ್ ಗೆ ಸಂಪರ್ಕಿಸಿಸುವಂತೆ ಠಾಣಾ ಪ್ರಕಟಣೆ ತಿಳಿಸಿದೆ.