


ಡೈಲಿವಾರ್ತೆ: 02/ಜು./2026


ರೋಟರಿ ಹಂಗಾರಕಟ್ಟೆ ಸಾಸ್ತಾನ – ವೈದ್ಯರ ದಿನಾಚರಣೆ

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇವರ ವತಿಯಿಂದ ವೈದ್ಯರ ದಿನಾಚರಣೆ ಸಂಬಂಧವಾಗಿ ಸಾಸ್ತಾನದ ಪ್ರಸಿದ್ಧ ವೈದ್ಯದಂಪತಿಗಳಾದ ಡಾ. ಹೇಮಂತ್ ಮತ್ತು ಡಾ.ಉಷಾ ಹೇಮಂತ್ ರವರನ್ನು ಅವರ
ಕ್ಲಿನಿಕ್ ನಲ್ಲಿ ಸಮ್ಮಾನಿಸಲಾಯಿತು.

ರೋಟರಿಯ 2026-27ನೇ ಸಾಲಿನ ನಿಯೋಜಿತ ಅಧ್ಯಕ್ಷೆ ರೊ.ಕುಸುಮಾ ಮನೋಜ್, ವೃತ್ತಿಪರ ಸೇವೆಯ ನಿರ್ದೇಶಕ ರೊ. ಮುರುಳೀಧರ ನಾಯರಿ, ರೊ. ಅರವಿಂದ ಶಮ೯, ರೊ. ಸುಲತಾ ಹೆಗ್ಡೆ, ರೊ. ಲೀಲಾವತಿ ಗಂಗಾಧರ, ರೊ. ಮನೋಜ್ ಕುಮಾರ್, ರೊ. ಜಿ. ಗಣೇಶ್ ಆಸ್ಪತ್ರೆ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ನಿಯೋಜಿತ ಕಾರ್ಯದರ್ಶಿ ರೊ. ಕೆ. ರಾಜಾರಾಮ ಐತಾಳ ಸ್ವಾಗತಿಸಿ ವಂದಿಸಿದರು.