ಡೈಲಿವಾರ್ತೆ: 05/ಜು./2026

ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ನೂತನ ಅಧ್ಯಕ್ಷರಾಗಿ ಎಂ.ಜೆ.ಎಫ್ ಲಯನ್ ಬನ್ನಾಡಿ ಪ್ರಭಾಕರ ಶೆಟ್ಟಿ ಆಯ್ಕೆ: ಜುಲೈ 25 ರಂದು ಪದಪ್ರಧಾನ

ಬ್ರಹ್ಮಾವರ: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಪ್ರಮುಖ ಕ್ಲಬ್‌ಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಜಯ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಹಾಗೂ ಬನ್ನಾಡಿ ಬ್ರಹ್ಮಬೈದರ್ಕಳ ಗರಡಿಯ ಮಾಜಿ ಅಧ್ಯಕ್ಷರಾದ ಎಮ್.ಜೆ.ಎಫ್ ಲಯನ್ ಬನ್ನಾಡಿ ಪ್ರಭಾಕರ ಶೆಟ್ಟಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
​ಅದೇ ರೀತಿ, ಕ್ಲಬ್‌ನ ನೂತನ ಕಾರ್ಯದರ್ಶಿಯಾಗಿ ವಿಜಯ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಲಯನ್ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಕೆ ಮತ್ತು ನೂತನ ಕೋಶಾಧಿಕಾರಿಯಾಗಿ ವಿಜಯ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಪ್ಲಾಡಿ ಇದರ ಮಾಜಿ ಕಾರ್ಯದರ್ಶಿ ಲಯನ್ ಉಪ್ಲಾಡಿ ಸುಗುಣಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಪ್ರಮುಖ ಪದಾಧಿಕಾರಿಗಳ ವಿವರ:
​ಸಂಸ್ಥೆಯ ಉನ್ನತ ಮುನ್ನಡೆಗಾಗಿ ವಿವಿಧ ಜವಾಬ್ದಾರಿಗಳಿಗೆ ದಕ್ಷ ಹಾಗೂ ಅನುಭವಿ ಸದಸ್ಯರನ್ನು ನೇಮಕಗೊಳಿಸಲಾಗಿದ್ದು, ವಿವರ ಈ ಕೆಳಗಿನಂತಿದೆ:
​ಉಪಾಧ್ಯಕ್ಷರುಗಳು: ಪ್ರಥಮ ಉಪಾಧ್ಯಕ್ಷರಾಗಿ ಲಯನ್ ಗುಂಡು ಶೆಟ್ಟಿ ಮಾನಂಬಳ್ಳಿ ಹಾಗೂ ದ್ವಿತೀಯ ಉಪಾಧ್ಯಕ್ಷರಾಗಿ ಎಂ.ಜೆ.ಎಫ್. ಲಯನ್ ವಸಂತ ಶೆಟ್ಟಿ ಸೂರಿಬೆಟ್ಟು ಅಚ್ಲಾಡಿ.
​ಕಾರ್ಯಕಾರಿ ಮಂಡಳಿ ಸದಸ್ಯರು: ನಿಕಟಪೂರ್ವ ಅಧ್ಯಕ್ಷ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಸ್ಥಾಪಕ ಕಾರ್ಯದರ್ಶಿ ಲಯನ್ ಪ್ರೊ. ಯಾಳಕ್ಲು ಚಂದ್ರಶೇಖರ ಶೆಟ್ಟಿ, ಲಯನ್ ಉಲ್ಲಾಸ್ ಶೆಟ್ಟಿ ಕಾವಡಿ, ಮಾಜಿ ಅಧ್ಯಕ್ಷ ಲಯನ್ ಅಡ್ವೊಕೇಟ್ ಕೊತ್ತಾಡಿ ಉದಯಕುಮಾರ್ ಶೆಟ್ಟಿ ಹಾಗೂ ಸ್ಥಾಪಕಾಧ್ಯಕ್ಷರು ಮತ್ತು ಮಾಜಿ ರೀಜನ್ ಚೇರ್ ಪರ್ಸನ್ ಲಯನ್ ಅಡ್ವೊಕೇಟ್ ಬನ್ನಾಡಿ ಸೋಮನಾಥ ಹೆಗ್ಡೆ.

ವಿವಿಧ ವಿಭಾಗಗಳ ಮುಖ್ಯಸ್ಥರು:
​ಎಲ್.ಸಿ.ಐ.ಎಫ್ ಕೋ-ಆರ್ಡಿನೇಟರ್: ಲಯನ್ ರಾಜೀವ್ ಶೆಟ್ಟಿ ಆಚ್ಲಾಡಿ
​ಮೆಂಬರ್ ಶಿಪ್ ಚೇರ್ ಪರ್ಸನ್: ಲಯನ್ ಲಕ್ಷ್ಮಣ ಶೆಟ್ಟಿ ಮಧುವನ
​ಸರ್ವಿಸ್ ಚೇರ್ ಪರ್ಸನ್: ಲಯನ್ ಅಶ್ವತ್ ಶೆಟ್ಟಿ ಮಧುವನ
​ಮಾರ್ಕೆಟಿಂಗ್ ಚೇರ್ ಪರ್ಸನ್: ಲಯನ್ ಹಾಲಾಡಿ ಇಂಜಿನಿಯರ್ ಪ್ರಶಾಂತ್ ಶೆಟ್ಟಿ
​ಲಯನ್ ಟೇಮರ್: ಲಯನ್ ಬಿ.ಬಿ. ಜೀವನ್
​ಸ್ಪೋಟ್ಸ್ & ಕಲ್ಚರಲ್ ಚೇರ್ ಪರ್ಸನ್: ಲಯನ್ ಸಂತೋಷ್ ಶೆಟ್ಟಿ ಕೂರಾಡಿ-ಬನ್ನಾಡಿ
​ಲಯನ್ ಟೇಲ್ ಟ್ವಿಸ್ಟರ್: ಲಯನ್ ಬನ್ನಾಡಿ ಶರತ್ ಶೆಟ್ಟಿ
​ಕಾರ್ಯಕಾರಿ ಸಮಿತಿ ಸದಸ್ಯರು (ಕ್ಲಬ್ ಮೆಂಬರ್ಸ್):
​ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, ಲಯನ್ ಸುರೇಂದ್ರ ಶೆಟ್ಟಿ ಕೊಮೆ, ಲಯನ್ ಬನ್ನಾಡಿ ಪ್ರವೀಣ್ ಹೆಗ್ಡೆ, ಲಯನ್ ಚಂದ್ರ ಶೆಟ್ಟಿ ಯಾಳಕ್ಲು, ಲಯನ್ ನಿತೀಶ್ ಆಚಾರ್ ಮಧುವನ, ಲಯನ್ ಮಹೇಂದ್ರ ಆಚಾರ್ ಮಧುವನ, ಲಯನ್ ಅಜಿತ್ ಕುಮಾರ್ ಶೆಟ್ಟಿ ಕೊತ್ತಾಡಿ, ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಲಯನ್ ಕರುಣಾಕರ ಶೆಟ್ಟಿ ಶಿರಿಯಾರ, ಲಯನ್ ಅಚ್ಲಾಡಿ ಸುಧಾಕರ ಶೆಟ್ಟಿ, ಲಯನ್ ಬನ್ನಾಡಿ ಸಂತೋಷ್ ಕುಮಾರ್ ಶೆಟ್ಟಿ (ಟಿ.ಸಿ.ಬಿ), ಲಯನ್ ರವಿರಾಜ್ ಶೆಟ್ಟಿ ವಡ್ಡರ್ಸೆ, ಲಯನ್ ಅಡ್ವೊಕೇಟ್ ಬನ್ನಾಡಿ ವಿನಯ್ ಕುಮಾರ್ ಶೆಟ್ಟಿ, ಲಯನ್ ರಂಜಿತ್ ಶೆಟ್ಟಿ ಯಾಳಕ್ಲು, ಲಯನ್ ಶರತ್ ಕುಮಾರ್ ಶೆಟ್ಟಿ ಕೊಮೆ, ಲಯನ್ ಸುಭಾಸ್ ಶೆಟ್ಟಿ ಮಧುವನ, ಲಯನ್ ಅಡ್ವೊಕೇಟ್ ರಾಜು ಪೂಜಾರಿ ಬನ್ನಾಡಿ, ಲಯನ್ ಸುದೇಶ್ ಶೆಟ್ಟಿ ಶಾನಾಡಿ, ಲಯನ್ ದೀಪಕ್ ಶೆಟ್ಟಿ ಬನ್ನಾಡಿ, ಲಯನ್ ವಡ್ಡರ್ಸೆ ಪ್ರಶಾಂತ್ ಶೆಟ್ಟಿ, ಲಯನ್ ಶೇಖರ್ ಶೆಟ್ಟಿ ಕೂರಾಡಿ, ಲಯನ್ ಸಂತೋಷ್ ಶೆಟ್ಟಿ ಕೂರಾಡಿ (ಸಿ.ಎ.ಬಿ), ಲಯನ್ ಅಚ್ಲಾಡಿ ಬಾಲಕೃಷ್ಣ ಶೆಟ್ಟಿ ಮತ್ತು ಲಯನ್ ಬೇಳೂರು ಮಹೇಶ್ ಶೆಟ್ಟಿ ಅವರುಗಳು ಕ್ಲಬ್‌ನ ಸಕ್ರಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಜುಲೈ 25 ರಂದು ವೈಭವದ ಪದಪ್ರಧಾನ ಕಾರ್ಯಕ್ರಮ:

ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಮುಂಬರುವ ದಿನಾಂಕ 25-07-2026ರ ಶನಿವಾರ ಸಂಜೆ 6:30 ಗಂಟೆಗೆ ಬನ್ನಾಡಿಯ “ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಭವನ”ದಲ್ಲಿ ಅತ್ಯಂತ ಗಂಭೀರ ಹಾಗೂ ಸಾಂಸ್ಥಿಕ ಶಿಸ್ತಿನೊಂದಿಗೆ ಜರುಗಲಿದೆ. ಲಯನ್ಸ್ ಜಿಲ್ಲೆ 317 C ಇದರ ಪ್ರಥಮ ಉಪಜಿಲ್ಲಾ ಗವರ್ನರ್ ಆಗಿರುವ ಪಿ.ಎಮ್.ಜೆ.ಎಫ್. ಲಯನ್ ಹರಿಪ್ರಸಾದ್ ರೈ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ಪದಾಧಿಕಾರಿಗಳಿಗೆ ಅಧಿಕೃತವಾಗಿ ಪದಪ್ರಧಾನ ನೆರವೇರಿಸಲಿದ್ದಾರೆ ಎಂದು ಕ್ಲಬ್‌ನ ಪ್ರಕಟಣೆ ತಿಳಿಸಿದೆ.