ಡೈಲಿವಾರ್ತೆ: 08/ಜು./2026

ಕೋಟದಲ್ಲಿ ಜುಲೈ 12ರಂದು ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ: ಮಾನವೀಯ ಸೇವೆಗೆ ಕೈಜೋಡಿಸಿ- ರಕ್ತದಾನವೇ ಜೀವದಾನ

ಕೋಟ, ಜು. 8: “ರಕ್ತದಾನ ಮಾಡಿ; ಜೀವಮಾನದ ಉಡುಗೊರೆ ನೀಡಿ” ಹಾಗೂ “ಒಂದು ಯೂನಿಟ್ ರಕ್ತ ಅಮೂಲ್ಯವಾದ ಮೂರು ಜೀವಗಳನ್ನು ಉಳಿಸಬಹುದು” ಎಂಬ ಮಾನವೀಯ ಸಂದೇಶದೊಂದಿಗೆ ಜುಲೈ 12ರಂದು ಕೋಟದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಕೋಟ ಘಟಕ ಹಾಗೂ ಮಹಿಳಾ ಸಂಘಟನೆ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ, ಗೀತಾನಂದ ಫೌಂಡೇಶನ್, ಮಣೂರು ಪಡುಕರೆ, ಕೆಎಂಸಿ ಆಸ್ಪತ್ರೆ ಮಣಿಪಾಲದ ರಕ್ತನಿಧಿ ಮತ್ತು ಉಡುಪಿ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಯಲಿದೆ.

ಈ ಮಹತ್ವದ ಸಮಾಜಮುಖಿ ಕಾರ್ಯಕ್ರಮಕ್ಕೆ ಬಾರಿಕೆರೆ ಯುವಕ ಮಂಡಲ (ರಿ.) ಕೋಟ, ಅರಮ ವಿಜಯ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಪಡುಕರೆ, ಬಾಳೆಬೆಟ್ಟು ಫ್ರೆಂಡ್ಸ್ (ರಿ.) ಬಾಳೆಬೆಟ್ಟು, ಹರ್ತಟ್ಟು ಯುವಕ ಮಂಡಲ (ರಿ.) ಕೋಟ ಹಾಗೂ ವಿನಾಯಕ ಫ್ರೆಂಡ್ಸ್ ಕೋಟತಟ್ಟು–ಪಡುಕರೆ ಸೇರಿದಂತೆ ಹಲವು ಸಂಘಟನೆಗಳು ಸಹಯೋಗ ನೀಡಿವೆ.
ಜುಲೈ 12ರಂದು ಭಾನುವಾರ ಬೆಳಗ್ಗೆ 8.30ರಿಂದ ಮಧ್ಯಾಹ್ನ 2.00ರವರೆಗೆ ಕೋಟದ ಮಾಂಗಲ್ಯ ಮಂದಿರದಲ್ಲಿ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹಾಗೂ ಆರೋಗ್ಯವಂತ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜೀವ ಉಳಿಸುವ ಈ ಮಹತ್ಕಾರ್ಯದಲ್ಲಿ ಕೈಜೋಡಿಸುವಂತೆ ಉಡುಪಿ ಜಿಲ್ಲೆಯ ಮೊಗವೀರ ಯುವ ಸಂಘಟನೆಯ ಕೋಟ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ಬಾರಿಕೆರೆ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9901789464 ಹಾಗೂ 9902013765 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.