ಡೈಲಿವಾರ್ತೆ:22/ಆಗಸ್ಟ್ /2026

ಕೊಡಗು: ಕಾಡಾನೆ ದಾಳಿ – ಬೆಂಗಳೂರು ಮೂಲದ ಪ್ರವಾಸಿಗ ಸಾವು!

ಕೊಡಗು: ವಾಯು ವಿಹಾರಕ್ಕೆ ತೆರಳಿದ್ದ ಬೆಂಗಳೂರು ಮೂಲದ ಪ್ರವಾಸಿಗ ಕಾಡಾನೆ ದಾಳಿಗೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಬೆಂಗಳೂರು ಮೂಲದ ಮುರಳಿಕೃಷ್ಣ (43) ಎಂದು ಗುರುತಿಸಲಾಗಿದೆ.

ರಜೆಯ ಮಜಾ ಕಳೆಯಲು ಬೆಂಗಳೂರಿಂದ ಬಂದಿದ್ದ ಮುರಳಿಕೃಷ್ಣ ಅವರು ತೆರಾಲು ಗ್ರಾಮದ ಹೋಂಸ್ಟೇ ಒಂದರಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ವಾಕಿಂಗ್ ಎಂದು ತೆರಳಿದ್ದ ಸಂದರ್ಭ ಕಾಡಾನೆಯೊಂದು ಮುರಳಿಕೃಷ್ಣ ಅವರ ಮೇಲೆ ಏಕಾಏಕಿ ದಾಳಿ ಮಾಡಿದೆ.
ಒಂಟಿಸಲಗನ ದಾಳಿಗೆ ಸಿಲುಕಿದ ಮುರಳಿಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದರೆ.

ವಿಷಯತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀಮಂಗಲ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ. ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.