ಡೈಲಿವಾರ್ತೆ:15/ಸೆ./2026

ಉಡುಪಿ ನಗರ ಠಾಣೆಗೆ ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್‌ನಿಂದ 18 ಬ್ಯಾರಿಕೇಡ್‌ಗಳ ಕೊಡುಗೆ

ಉಡುಪಿ: ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್ ವತಿಯಿಂದ ಉಡುಪಿ ನಗರ ಠಾಣೆಗೆ ಕೊಡುಗೆಯಾಗಿ ನೀಡಲಾದ 18 ಬ್ಯಾರಿಕೇಡ್‌ಗಳ ಹಸ್ತಾಂತರ ಕಾರ್ಯಕ್ರಮ ಮಂಗಳವಾರ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಡೆಯಿತು.
ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್‌ನ ಸಮೀರ್ ಹೊನಕಲ್ ಅವರು 18 ಬ್ಯಾರಿಕೇಡ್‌ಗಳನ್ನು ಉಡುಪಿ ನಗರ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್‌ನ ಸಮೀರ್ ಹೊನಕಲ್ ನಗರದಲ್ಲಿ ಸಂಚಾರ ನಿಯಂತ್ರಣ ಸಾರ್ವಜನಿಕರ ಸುರಕ್ಷತೆ ಹಾಗೂ ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಗೆ ಬ್ಯಾರಿಕೇಡ್‌ಗಳು ಅಗತ್ಯವಾಗಿವೆ.
ಪೊಲೀಸ್ ಇಲಾಖೆಯ ಕಾರ್ಯಕ್ಕೆ ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಸಹಕಾರ ನೀಡುವ ಉದ್ದೇಶದಿಂದ ಈ ಕೊಡುಗೆ ನೀಡಲಾಗಿದೆ. ಮುಂದೆಯೂ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಕಾರ್ಯಗಳಿಗೆ ಕೈಜೋಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಉಡುಪಿ ನಗರ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಮಾತನಾಡಿ ನಗರದಲ್ಲಿ ಸಂಚಾರ ನಿಯಂತ್ರಣ ಪ್ರಮುಖ ಕಾರ್ಯಕ್ರಮಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಬ್ಯಾರಿಕೇಡ್‌ಗಳು ಪೊಲೀಸರಿಗೆ ಬಹಳಷ್ಟು ಸಹಕಾರಿಯಾಗಲಿವೆ. ಪೊಲೀಸ್ ಇಲಾಖೆಯ ಅಗತ್ಯವನ್ನು ಮನಗಂಡು ಬ್ಯಾರಿಕೇಡ್‌ಗಳನ್ನು ಕೊಡುಗೆಯಾಗಿ ನೀಡಿದ ಕೋಜಿ ಬಿಲ್ಡರ್ ಅಂಡ್ ಡೆವಲಪರ್ಸ್‌ಗೆ ಇಲಾಖೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಭರತೇಶ್ ಕಂಕಣವಾಡಿ, ಪ್ರಕಾಶ್ ಕೆ. ಹಾಗೂ ಮುಖ್ಯ ಆರಕ್ಷಕ ಸಂತೋಷ್ ಗುಲ್ವಾಡಿ ಉಪಸ್ಥಿತರಿದ್ದರು.