ಡೈಲಿವಾರ್ತೆ:10/ಅ./2026

ಉಡುಪಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅ. 19 ಕೊನೆಯ ದಿನ

ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993ರ ಅನ್ವಯ ಉಡುಪಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸ್ಥಾನಗಳ ಮೀಸಲಾತಿ ನಿಗದಿಪಡಿಸುವ ಸಂಬಂಧ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ಅಧಿಸೂಚನೆಯ ಪ್ರಕಾರ, ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಕ್ಷೇತ್ರಗಳಿಗೆ ಸಾಮಾನ್ಯ, ಸಾಮಾನ್ಯ (ಮಹಿಳೆ), ಹಿಂದುಳಿದ ವರ್ಗಗಳ ‘ಎ’ ಮತ್ತು ‘ಬಿ’ ವರ್ಗ ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.
ಮೀಸಲಾತಿ ಪಟ್ಟಿ ಪ್ರಕಟಿಸುವ ಮೂಲಕ ಮುಂದಿನ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮೀಸಲಾತಿ ನಿಗದಿಯಲ್ಲಿ ವಿವಿಧ ವರ್ಗಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆಯಾ ಕ್ಷೇತ್ರಗಳ ಮೀಸಲಾತಿ ವಿವರಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಕರಡು ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 10 ದಿನಗಳೊಳಗೆ, ಅಂದರೆ 2026ರ ಅಕ್ಟೋಬರ್ 19ರಂದು ಸಂಜೆ 5 ಗಂಟೆಯೊಳಗೆ, ಸಾರ್ವಜನಿಕರು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಬಹುದಾಗಿದೆ. ನಿಗದಿತ ಅವಧಿಯೊಳಗೆ ಸಲ್ಲಿಕೆಯಾಗುವ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಯಾವ ಕ್ಷೇತ್ರಕ್ಕೆ ಯಾವ ಮೀಸಲಾತಿ?
ಉಡುಪಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ವಿವರಗಳು ಹೀಗಿವೆ:

ಕ್ರ.ಸಂ.
ಕ್ಷೇತ್ರದ ಹೆಸರು
ಮೀಸಲಾತಿ

  1. ಶಿರೂರು – ಹಿಂದೂಳಿದ ವರ್ಗ ‘ಎ’ (ಮಹಿಳೆ)
  2. ಕೊಲ್ಲೂರು – ಸಾಮಾನ್ಯ (ಮಹಿಳೆ)
  3. ಕಂಬದಕೋಣೆ – ಹಿಂದೂಳಿದ ವರ್ಗ ‘ಎ’ (ಮಹಿಳೆ)
  4. ತ್ರಾಸಿ – ಸಾಮಾನ್ಯ
  5. ವಂಡ್ಸೆ – ಸಾಮಾನ್ಯ
  6. ಸಿದ್ದಾಪುರ – ಸಾಮಾನ್ಯ (ಮಹಿಳೆ)
  7. ಕಾವ್ರಾಡಿ – ಅನುಸೂಚಿತ ಜಾತಿ
  8. ಕೋಟೇಶ್ವರ – ಹಿಂದೂಳಿದ ವರ್ಗ ‘ಎ’ (ಮಹಿಳೆ)
  9. ಬೀಜಾಡಿ – ಸಾಮಾನ್ಯ
  10. ಹಾಲಾಡಿ – ಸಾಮಾನ್ಯ
  11. ಕೋಟ – ಸಾಮಾನ್ಯ
  12. ಶಿರಿಯಾರ – ಹಿಂದೂಳಿದ ವರ್ಗ ‘ಎ’ (ಮಹಿಳೆ)
  13. ಮಂದಾರ್ತಿ – ಸಾಮಾನ್ಯ (ಮಹಿಳೆ)
  14. ಉಪ್ಪೂರು – ಅನುಸೂಚಿತ ಪಂಗಡ (ಮಹಿಳೆ)
  15. ಬ್ರಹ್ಮಾವರ – ಸಾಮಾನ್ಯ (ಮಹಿಳೆ)
  16. ಪೆರ್ಡೂರು – ಹಿಂದೂಳಿದ ವರ್ಗ ‘ಎ’
  17. 80-ಬಡಗಬೆಟ್ಟು – ಸಾಮಾನ್ಯ (ಮಹಿಳೆ)
  18. ಉದ್ಯಾವರ – ಸಾಮಾನ್ಯ
  19. ಕಲ್ಯಾಣಪುರ – ಸಾಮಾನ್ಯ (ಮಹಿಳೆ)
  20. ಶಿರ್ವ – ಹಿಂದೂಳಿದ ವರ್ಗ ‘ಬಿ’ (ಮಹಿಳೆ)
  21. ಎಲ್ಲೂರು – ಸಾಮಾನ್ಯ
  22. ಪಡುಬಿದ್ರಿ – ಹಿಂದೂಳಿದ ವರ್ಗ ‘ಎ’ (ಮಹಿಳೆ)
  23. ಹೆಬ್ರಿ – ಸಾಮಾನ್ಯ (ಮಹಿಳೆ)
  24. ಚಾರಾ – ಹಿಂದೂಳಿದ ವರ್ಗ ‘ಬಿ’
  25. ಮರ್ಣೆ – ಸಾಮಾನ್ಯ
  26. ಬೈಲೂರು – ಹಿಂದೂಳಿದ ವರ್ಗ ‘ಎ’
  27. ಮಿಯಾರು – ಅನುಸೂಚಿತ ಜಾತಿ (ಮಹಿಳೆ)
  28. ಬೆಳ್ಮಣ್ – ಸಾಮಾನ್ಯ