


ಡೈಲಿವಾರ್ತೆ: 01/ನ./2026




ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕ ವತಿಯಿಂದ ರಾಜ್ಯೋತ್ಸವ ಆಚರಣೆ

ಬಂಟ್ವಾಳ : ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕ ಆಶ್ರಯದಲ್ಲಿ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕನ್ನಡ ಧ್ವಜಾರೋಹಣ ನಡೆಸಲಾಯಿತು.
ಕ.ಸಾ.ಪ. ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ಸಂಕಪ್ಪ ಶೆಟ್ಟಿ ಸಂಚಯಗಿರಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವ ಶಾಲೆಗಳು ಇಂದು ಬಡವಾಗುತ್ತಿದ್ದು, ಈ ಕುರಿತು ಗಮನಹರಿಸಬೇಕು. ಕನ್ನಡ ಭಾಷೆ ಮಾತನಾಡುವ ವಿಚಾರದಲ್ಲಿ ಕೀಳರಿಮೆ ಸಲ್ಲದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಪೂವಪ್ಪ ನೇರಳಕಟ್ಟೆ, ತಾಲೂಕು ಕಸಾಪ ಗೌರವ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ನೂಜಿಪ್ಪಾಡಿ, ವಿ.ಸು.ಭಟ್, ಹೋಬಳಿ ಅಧ್ಯಕ್ಷ ಪಿ.ಮುಹಮ್ಮದ್, ರವೀಂದ್ರ ಕುಕ್ಕಾಜೆ, ಉಮೇಶ್ ಕುಮಾರ್ ವೈ, ರಜನಿ ಚಿಕ್ಕಯ್ಯಮಠ, ಅಬುಬಕರ್ ಅಮ್ಮುಂಜೆ, ಸಲೀಂ ಬೋಳಂಗಡಿ, ಜಯರಾಮ ಪಡ್ರೆ, ಸಾಯಿರಾಮ ನಾಯಕ್, ಹರೀಶ ಮಾಂಬಾಡಿ ಮತ್ತಿತರರು ಉಪಸ್ಥಿತರಿದ್ದರು.

