ಡೈಲಿ ವಾರ್ತೆ : 30 ಮೇ 2022

ವಚನ ಸಾಹಿತ್ಯವನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ ಹಾಡಲು ಆರಂಭಿಸಿದ ಮೊದಲಿಗರು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು. ನಾದ ಪ್ರೀಯ ಶಿವನೆಂಬುವರು ಎನ್ನುವ ಬಸವಣ್ಣನವರ ವಚನ ಮೊದಲು ರಾಗ ಸಂಯೋಜನೆಗೆ ಒಳಪಟ್ಟ ವಚನ. ೧೯೩೨ರಲ್ಲಿ ಸೊಲ್ಲಾಪುರದ ಶರಣಮ್ಮನವರ ಆಮಂತ್ರಣದ ಮೇರೆಗೆ ಸೊಲ್ಲಾಪುರದಲ್ಲಿ ನಡೆದ ಬಸವ ಜಯಂತಿ ಉತ್ಸವದಲ್ಲಿ ವಚನಗಳನ್ನು ಹಾಡಿದ ಮೊದಲ ಸಾರ್ವಜನಿಕ ವೇದಿಕೆ. ಇಂದು ಆ ಪರಂಪರೆ ಮುಂದುವರೆದಿದ್ದು ದೊಡ್ಡ ದೊಡ್ಡ ಸಂಗೀತಗಾರರು ಶಾಸ್ತ್ರೀಯ ಸಂಗೀತದ ಕಚೇರಿಗಳಲ್ಲಿ ವಚನಗಳನ್ನು ಹಾಡುವುದನ್ನು ರೂಢಿಮಾಡಿಕೊಂಡಿದ್ದಾರೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ಗದುಗಿನ ಪೂಜ್ಯಶ್ರೀ ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಹೇಳಿದರು.

ಚಿತ್ತಾಪುರ ಪಟ್ಟಣದ ಸರಕಾರಿ ಪ್ರೌಢ ಶಾಲೆಯಲ್ಲಿ ದಿನಾಂಕ ೨೯ ರಂದು ಬಾನುವಾರ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿ ಕಲಬುರ್ಗಿ ಜಿಲ್ಲಾ ಸಮಿತಿಯಿಂದ, ಪಂ. ಪುಟ್ಟರಾಜ ಗುರುವರ್ಯರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ಹಮ್ಮಿಕೊಂಡಿದ್ದ, ‘ಗುರು ವಚನ ಪ್ರಭ’ ಜಿಲ್ಲಾ ಮಟ್ಟದ ವಚನ ಗೋಷ್ಠಿ ಮತ್ತು ವಚನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತ, ವಚನಗಳನ್ನು ಮನೆ ಮನೆಗಳಿಗೆ ಮುಟ್ಟುವಂತಾಗಲು ಅಸ್ತಿಭಾರ ಹಾಕಿದವರು ಪಂಚಾಕ್ಷರಿ ಗವಾಯಿಗಳು. ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಡಾ. ಪಂಡಿತ ಪುಟ್ಟರಾಜ ಕವಿ, ಗವಾಯಿಗಳವರು ಗುರು ಕುಮಾರ ಪಂಚಾಕ್ಷರೇಶ್ವರ ಅಂಕಿತ ನಾಮದಿಂದ ವೈವಿಧ್ಯಮಯ ವಿಷಯಗಳ್ನು ಒಳಗೊಂಡ ವಚನಗಳನು ರಚಿಸಿದ್ದು ಗುರು ವಚನ ಪ್ರಭ ಎನ್ನುವ ಹೆಸರಿನಲ್ಲಿ ಗ್ರಂಥವನ್ನು ಪ್ರಕಟಿಸಿ ವಚನ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಷ. ಬ್ರ. ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಕಂಬಳೇಶ್ವರ ಸಂಸ್ಥಾನ ಮಠ ಚಿತ್ತಾಪೂರ ಇವರು ತಮ್ಮ ಆಶಿರ್ವಚನದಲ್ಲಿ, ವಚನ ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿ ಇದೆ ಎಂದು ನುಡಿದರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಕಲಬುರ್ಗಿ ಜಿಲ್ಲಾ ಸಂಚಾಲಕರಾದ ವಚನಕಾರ ಪಂಚಾಕ್ಷರಿ ಬ. ಪೂಜಾರಿ ದಂಡಗುಂಡ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಹಿರಿಯ ಮುಖಂಡರಾದ ಭೀಮಣ್ಣ ಸಾಲಿ ಚಿತ್ತಾಪೂರ ಡಾ. ಮಲ್ಲಿನಾಥ ತಳವಾರ ತಾಲೂಕಾ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು ಚಿತ್ತಾಪೂರ, ಇವರು ಮಾತಾಡಿದರು. ಎಸ್. ಕೆ. ಬೀರೇದಾರ ತಾಲೂಕಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ಇವರು ವಚನ ಸಾಹಿತ್ಯ ಕುರಿತು ವಿಷೇಶ ಉಪನ್ಯಾಸ ನೀಡಿದರು. ವೀರೇಂದ್ರ ಕೋಲ್ಲೊರ ತಾಲೂಕಾ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಚಿತ್ತಾಪೂರ, ಕಾಶಿರಾಯ ಕಲಾಲ ಮುಖ್ಯಗುರುಗಳು ಸರಕಾರಿ ಪ್ರೌಡಶಾಲೆ ಚಿತ್ತಾಪೂರ, ರೇವಣಸಿದ್ದಪ್ಪ ರೋಣದ ವೇದಿಕೆಯಲ್ಲಿ ಇದ್ದರು.

ಖ್ಯಾತ ಸಂಗೀತ ಕಲಾವಿದರಾದ ರೇವಣಸಿದ್ಧಯ್ಯ ಹಿರೇಮಠ ಸಂಗೀತ ಶಿಕ್ಷಕರು ಚಿಂಚೋಳಿ ಮತ್ತು ಸಂತೋಷಿ ಮಠಪತಿ ರಾಜಗೀರಾ ಬೀದರ ಇವರಿಂದ ವಚನ ಗಾಯನ ನಡೆಯಿತು. ಇವರಿಗೆ ರಾಜಶೇಖರಯ್ಯ ಮಠಪತಿ ಅಳ್ಳೋಳ್ಳಿ ಇವರು ತಬಲಾ ಸಾಥ ನೀಡಿದರು. ಕಲಬುರ್ಗಿ ಜಿಲ್ಲೆಯ ಆಧುನಿಕ ವಚನಕಾರರಾದ, ಸುಭಾಷಸ್ವಾಮಿ ತೊಟ್ನಳ್ಳಿಮಠ ಲಿಂಗಾರೆಡ್ಡಿ ಶೇರಿ, ನರಸಿಂಹರಾವ್ ಹೇಮನೂರ, ಡಾ. ಬಿ. ಆರ್. ಅಣ್ಣಾಸಾಗರ ಕಾಳಗಿ, ಭೀಮರಾಯ ಹೇಮನೂರ ಕಲಬುರ್ಗಿ, ಡಾ.ಶೋಭಾದೇವಿ ಚಕ್ಕಿ ಸಂತೋಷಿ ಮಠಪತಿ ರಾಜಗೀರಾ, ಪ್ರೋ. ಸುನಂದಾ ಕಲ್ಲಾ, ಡಾ. ರಾಜಶೇಖರ ಮಾಂಗಾ, ನೀಲಕಂಠಪ್ಪ ಎಚ್. ಊಡಗಿ ಸೇಡಂ, ಲಿಂಗಣ್ಣ ಆರ್.ಮಲ್ಕನ್ ಕೋಲ್ಲೂರ, ಸಾಯಪ್ಪ ಮುನಿ ಮೊಗಲಪ್ಪ ಮೆದಕ್, ಲಕ್ಷಣ ರಂಜೋಳಕರ, ವೀರಯ್ಯ ಸ್ಥಾವರಮಠ, ಶರಣರೆಡ್ಡಿ ಕೋಡ್ಲಾ ಮತ್ತು ಪಂಚಾಕ್ಷರಿ ಬ. ಪೂಜಾರಿ ದಂಡಗುಂಡ ವಚನಗಳನ್ನು ವಾಚನ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸರಕಾರಿ ಪ್ರೌಢ ಶಾಲೆಯ ವಿಧ್ಯಾರ್ಥಿನಿಯರು ವಚನ ಪ್ರಾರ್ಥನಾ ಗೀತೆ ಹಾಡಿದರು. ಪಂಚಾಕ್ಷರಿ ಪೂಜಾರಿ ಸ್ವಾಗತಿಸಿದರು ಚಂದ್ರಶೇಖರ ಅವುಂಟಿ ವಂದನಾರ್ಪಣೆ ಮಾಡಿದರ. ಸಿದ್ದಲಿಂಗ ಬಾಳಿ ನೀರೂಪಣೆ ಮಾಡಿದರು. ಸಂತೋಷಿ ಮಠಪತಿ ವಚನ ಮಂಗಲ ಗೀತೆ ಹಾಡಿದರು.