ಡೈಲಿ ವಾರ್ತೆ: 05/ಮೇ /2024
ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು!
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ತುಂಬಾ ಒಳ್ಳೆಯ ಅಭ್ಯಾಸ. ಅದರಲ್ಲೂ ಚಳಿಗಾಲದಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ಬಿಸಿ ನೀರು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಏನು ಪ್ರಯೋಜನವಿದೆ ಅಂತ ತಿಳಿಯೋಣ ಬನ್ನಿ.
1) ಉಗುರು ಬೆಚ್ಚಗಿನ ನೀರು ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
2) ತೂಕ ಇಳಿಸಲು ಸಹಾಯ ಮಾಡುತ್ತದೆ
3) ಕರುಳು ಶುದ್ಧವಾಗಿರುತ್ತದೆ
4) ಜೀರ್ಣಾಂಗ ವ್ಯವಸ್ಥೆಯ ಅಂಗಗಳನ್ನು ನಯಗೊಳಿಸಲು ನೀರು ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
5) ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕೊಬ್ಬನ್ನು ಸುಡಲು ಸಹಕಾರಿ.
6) ದೇಹದಿಂದ ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಸಹಾಯಕ.
7) ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ದೇಹದ ಉಷ್ಣತೆಯು ಕ್ರಮೇಣ ಹೆಚ್ಚಾದಂತೆ ಚಯಾಪಚಯ ವ್ಯವಸ್ಥೆಯು ಹೆಚ್ಚು ಸಕ್ರಿಯವಾಗುತ್ತದೆ.
8) ದೇಹ ಉಬ್ಬುವುದು ಕಡಿಮೆ.
9) ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವಿನ ನಿವಾರಣೆ.
10) ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ದೇಹದ ತ್ರಿದೋಷಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ಆಯುರ್ವೇದ ಹೇಳುತ್ತದೆ.
11) ಉಗುರುಬೆಚ್ಚನೆಯ ನೀರು ಕುಡಿಯುವುದು ಚಯಾಪಚಯ ವ್ಯವಸ್ಥೆ ಸಕ್ರಿಯವಾಗುತ್ತದೆ
12) ಉಗುರು ಬೆಚ್ಚನೆಯ ನೀರಿಗೆ ನಿಂಬೆರಸ ಬೆರೆಸಿ ಬೆಳಗ್ಗೆ ಕುಡಿದರೆ ದೇಹಕ್ಕೆ ಹೆಚ್ಚಿನ ಲಾಭ ಸಿಗುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.