ಡೈಲಿ ವಾರ್ತೆ : 30 ಜೂನ್ 2022

ಉಡುಪಿ: ರಾಜ್ಯ ಸರ್ಕಾರವು ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ರಚಿಸಿ ಕರಾವಳಿ ಭಾಗದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಹಿಂದುತ್ವ ಅಜೆಂಡ ಬಳಸಿ ಅಧಿಕಾರಕ್ಕೆ ಬಂದ ಬಿಜೆಪಿ ತನ್ನ ಹಿಡನ್ ಅಜೆಂಡಾವಾದ ಹಿಂದುಳಿದ ವರ್ಗವನ್ನು ಧಮನಿಸುವ ಕಾರ್ಯತಂತ್ರವನ್ನು ನಿಧಾನಕ್ಕೆ ಅನುಷ್ಠಾನ ಗೊಳಿಸುತ್ತಿದೆ.


ಈ ನಿಟ್ಟಿನಲ್ಲಿ ಅವರು ಮಾಡಿದ ಮೊದಲ ಕೆಲಸ ಹಿಂದುಗಳ ಆರಾಧ್ಯ ದೈವ, ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಕುರಿತ ಪಠ್ಯವನ್ನು ಶಾಲೆಯ ಪುಸ್ತಕ ದಿಂದ ತೆಗೆದಿದ್ದು. ಇದು ಕರಾವಳಿ ಭಾಗದ ಹಿಂದುಳಿದ ವರ್ಗಗಳಿಗೆ ಮಾಡಿದ ಘೋರ ಅಪಮಾನ, ಅಂತೆಯೇ ಕರಾವಳಿಯ ಇನ್ನೊಬ್ಬ ಮೇಧಾವಿ, ಹೆಸರಾಂತ ಕವಿ ಕಯ್ಯಾರ ಕಿಂಞಣ್ಣ ರೈ ಅವರ ಕುರಿತ ಪಠ್ಯ ವನ್ನು ತೆಗೆದು ಹಾಕಿದ್ದು ಈ ಬಗ್ಗೆ ಬಂಟರ ಸಂಘದ ಒಕ್ಕೂಟ ಪ್ರಬಲವಾಗಿ ಖಂಡಿಸಿದೆ,

ಈ ರೀತಿಯಾಗಿ ಬಸವಣ್ಣ, ಕುವೆಂಪು, ಕನಕದಾಸರು ಆದಿಯಾಗಿ ಎಲ್ಲರ ಪಠ್ಯವನ್ನು ತೆಗೆದು, ವಿರೂಪಗೊಳಿಸಿ ರಾಜ್ಯದ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಲ್ಲದೆ ವಿಶೇಷವಾಗಿ ಕರಾವಳಿ ಭಾಗದಿಂದ ಗೆದ್ದು ಅಧಿಕಾರ ಪಡೆದು ಕರಾವಳಿ ಭಾಗದ ಪುಣ್ಯ ಪುರುಷರಿಗೆ ಪಠ್ಯ ಪುಸ್ತಕಗಳಲ್ಲಿ ಅವಮಾನ ಮಾಡಿರುವುದು ಖಂಡನೀಯ .
ಇನ್ನಾದರೂ ಕರಾವಳಿ ಜನ ಬಿಜೆಪಿಯನ್ನು ದೂರ ಇಡಬೇಕಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.