ಡೈಲಿ ವಾರ್ತೆ: 27/April/2024
ಕೋಟದಲ್ಲಿ ನಡೆದ ನೋಟ ಅಭಿಯಾನ
ಕೋಟ: ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಯಶಸ್ವಿನಡೆದಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಡೆ ಎಲ್ಲರ ಗಮನ ಸೆಳೆಯಿತು ಯಾಕೆಂದರೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಯವರ ತವರು ಆಗಿರುವ ಕೋಟ ಪಡುಕೆರೆಯ ಕೋಟತಟ್ಟುನಲ್ಲಿ ನೋಟ ಅಭಿಯಾನ ಚುರುಕಾಗಿ ನಡೆದಿದೆ.
ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರಕ್ಕೆ 11 ವರ್ಷವಾದರು ಸಹ ನ್ಯಾಯ ಸಿಕ್ಕಿಲ್ಲ ಹಾಗಾಗೀ ಸೌಜನ್ಯಳ ಸಾವಿಗೆ ನ್ಯಾಯ ಒದಗಿಸಲು ಹೋರಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ತಂಡ ನೋಟ ಅಭಿಯಾನ ಆರಂಭಿಸಿದ್ದು ಈ ಹಿಂದೆ ಸೌಜನ್ಯ ಪರ ಹೋರಾಟದಲ್ಲಿ ನಿರತರಾಗಿದ್ದ ದಿನೇಶ್ ಗಾಣಿಗ ಕೋಟ ಅವರ ನೇತೃತ್ವದಲ್ಲಿ ಕೋಟದಲ್ಲಿ ನೋಟ ಅಭಿಯಾನ ನಡೆಯಿತು.
ಈ ಸಂದರ್ಭ ಮಾತನಾಡಿದ ನೋಟ ಅಭಿಯಾನದ ಸಂಚಾಲಕ ದಿನೇಶ್ ಗಾಣಿಗ ಅವರು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ತನಿಖೆ ವಿಳಂಬ ನೀತಿಯಿಂದ ಅನ್ಯಾಯಕ್ಕೊಳ್ಳಗಾದ ನತದೃಷ್ಟರಿಗೆ ನ್ಯಾಯ ದೊರಕಿಸಿ ಕೊಡುವಂತೆ ಹಲವು ಹೋರಾಟಗಳನ್ನು ನಡೆಸಲಾಗಿದೆ ಆದರೆ ಇದುವರೆಗೆ ಆಡಳಿತ ಜನಪ್ರತಿನಿಧಿಗಳಾಗಲಿ ಸರ್ಕಾರವಾಗಲಿ, ತಲೆ ಕೆಡಿಸಿಕೊಂಡಿಲ್ಲ ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ನೋಟ ಅಭಿಯಾನ ಚುರುಕುಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದುವರೆ ಲಕ್ಷ ನೋಟ ಅಭಿಯಾನ ನಡೆಸಲಾಗುತ್ತದೆ ಅದೇ ರೀತಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ 50 ಸಾವಿರ ನೋಟ ಮತಗಳನ್ನು ಚಲಾಯಿಸುವಂತೆ ಅಭಿಯಾನ ನಡೆಸಲಾಗುತ್ತಿದೆ ಆ ಮೂಲಕ ಅನ್ಯಾಯಕ್ಕೆ ಒಳಗಾದ ಸೌಜನ್ಯಳಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಈ ಮೂಲಕ ಹೋರಾಟ ನಡೆಸಲಾಗುತ್ತಿದೆ ಎಂದರು.