ಡೈಲಿ ವಾರ್ತೆ : 30 ಜೂನ್ 2022

✍🏻 ಬಸವರಾಜ್ ಎಸ್ ಬಾಗೇವಾಡಿ ಮಠ

ರಾಣೆಬೇನ್ನೂರು:- ಜೂ 30 ಮಕ್ಕಳು ಪುಸ್ತಕ ಮತ್ತು ಪತ್ರಿಕೆ ಓದುವ ಹವ್ಯಾಸವನ್ನು ಕಡಿಮೆ ಮಾಡಿ ಬರಿ ಮೊಬೈಲ್ ನಲ್ಲಿ
ಕಾಲಹರಣ ಮಾಡುತ್ತಾರೆ. ಮಕ್ಕಳು ತಂತ್ರಜ್ಞಾನಗಳನ್ನು ಕಡಿಮೆ ಪತ್ರಿಕೆ ಮತ್ತು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳಸಿ ಕೊಳ್ಳಬೇಕು ಏಕೆಂದರೆ ನಾವು ಓದುವ ಹವ್ಯಾಸವನ್ನು ಬೆಳಸಿ ಕೊಂಡರೆ ನಮಗೆ ಮನಸ್ಸಿಗೆ ಶಾಂತಿ, ನೆಮ್ಮದಿ, ಸಮೃದ್ಧಿ,
ಸಿಗುತ್ತವುದಲ್ಲದೆ ಮಕ್ಕಳಲ್ಲಿ ಜ್ಞಾನ ಸಂಪಾದನೆ
ಹೆಚ್ಚಾಗುತ್ತದೆ. ಎಂದು ದೃಷ್ಟಿಯಿಂದ ರಾಣೆಬೇನ್ನೂರಿನ ಯುವ ಕವಿ,ಸಾಹಿತಿ, ಲೇಖಕರು, ಸಂಸ್ಥೆಯ ಸಂಸ್ಥಾಪಕರಾದ
ಬಿ. ಎಸ್. ಬಾಗೇವಾಡಿಮಠರವರು ತಮ್ಮ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥೆ ಹಾಗೂ ಹಳೆಯ ಪುಸ್ತಕ ಸಂಗ್ರಹ ಅಭಿಯಾನ
ವತಿಯಿಂದ ಜುಲೈ ತಿಂಗಳಲ್ಲಿ ಪತ್ರಿಕೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಹಳೆಯ
ಪುಸ್ತಕ ಜೋಳಿಗೆಯ ರೂವಾರಿಯಾದ ಬಸವರಾಜ ಬಾಗೇವಾಡಿಮಠರವರು ಪ್ರಕಟನೆ ತಿಳಿದ್ದಾರೆ.