ಡೈಲಿ ವಾರ್ತೆ: 27/April/2024

ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವುದರ ಬಗ್ಗೆ ಇಲ್ಲಿದೆ ಮಾಹಿತಿ

ಶೀತ, ನೆಗಡಿ, ಕೆಮ್ಮು ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಕಂಡುಬರುವ ಸಮಸ್ಯೆಯಾಗಿದೆ. ಇವುಗಳಿಗೆ ಸರಿಯಾಗಿ ಚಿಕಿತ್ಸೆ  ಪಡೆಯದೆ ಹಾಗೆಯೇ ಬಿಟ್ಟರೆ ಮುಂದೆ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಬಹುದು.
ಶ್ವಾಸಕೋಶವನ್ನು ಶುದ್ಧವಾಗಿಸಲು  ಮತ್ತು ಬಲವಾಗಿಸಲು, ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಮತ್ತು ಉರಿಯೂತದ  ಗುಣಲಕ್ಷಣಗಳನ್ನು ಹೊಂದಿರುವ ಆಹಾರವನ್ನು ತಿನ್ನಲು ಸೂಚಿಸಲಾಗುತ್ತದೆ. ಹಾಗಾದರೆ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವುದು ಹೇಗೆ ಅಂತ ತಿಳಿಯೋಣ ಬನ್ನಿ.

ಶ್ವಾಸಕೋಶದ ಆರೋಗ್ಯ ಕಾಪಾಡಲು ಅತ್ಯುತ್ತಮ ಆಹಾರ ಪದಾರ್ಥಗಳು:
➤ ಬೆಳ್ಳುಳ್ಳಿಯಲ್ಲಿ  ಉತ್ತಮ ಪ್ರಮಾಣದ ಫ್ಲವನಾಯ್ಡ್ ಗಳಿದ್ದು, ಇದು ವಿಷಕಾರಿ ಮತ್ತು ಕ್ಯಾನ್ಸರ್ ಕಾರಕ ಅಂಶಗಳನ್ನು ಹೊರಗೆ ಹಾಕುವುದು. ಅದೇ ರೀತಿಯಾಗಿ ಬೆಳ್ಳುಳ್ಳಿಯಲ್ಲಿ ಬಳಸಿದರೆ ಆಗ ಇದು ಆಹಾರಕ್ಕೆ ರುಚಿ ನೀಡುವುದು

➤ ಕ್ಯಾಪ್ಸೈಸಿನ್ ಅಂಶವು ಮೆಣಸನ್ನು ಖಾರ ಮಾಡುವಲ್ಲಿ ಪ್ರಮುಖವಾಗಿ ಕೆಲಸ ಮಾಡುವಂತಹ ಅಂಶ. ಕ್ಯಾಪ್ಸೈಸಿನ್ ಅಂಶವು ಶ್ವಾಸಕೋಶದಲ್ಲಿ ಲೋಳೆಯು ಜಮೆ ಆಗುವುದನ್ನು ತಡೆಯುವುದು ಮತ್ತು ಆರೋಗ್ಯಕಾರಿ ಸ್ರವಿಸುವಿಕೆಯನ್ನು ಉತ್ತೇಜಿಸುವುದು. ಇದು ಶ್ವಾಸಕೋಶ ವ್ಯವಸ್ಥೆಯ ಮೇಲಿನ ಮತ್ತು ಕೆಳಗಿನ ಭಾಗದಲ್ಲಿನ ಪೊರೆಗಳನ್ನು ರಕ್ಷಣೆ ಮಾಡುವುದು. ಆಹಾರದಲ್ಲಿ ಮೆಣಸನ್ನು  ಬಳಸಿಕೊಂಡರೂ ಇದರಲ್ಲಿನ ಲಾಭಗಳು ಆರೋಗ್ಯಕ್ಕೆ ಲಭ್ಯವಾಗಲಿದೆ. ಇದು ಉಸಿರಾಟವನ್ನು ಉತ್ತಮಪಡಿಸುವುದು ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ದೂರ ಮಾಡುವುದು.

➤ ಪೋಷಕಾಂಶಗಳಿಂದ ಸಮೃದ್ಧವಾಗಿ ಇರುವಂತಹ ಬೆರ್ರಿಗಳಲ್ಲಿ ಉತ್ತಮ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶವಿದೆ. ಇದನ್ನು ಆಹಾರ ಕ್ರಮದಲ್ಲಿ ವಿವಿಧ ರೀತಿಯಿಂದ ಬಳಕೆ ಮಾಡಬಹುದು. ಇದನ್ನು ಜ್ಯೂಸ್, ಸ್ಮೂಥಿ ಮತ್ತು ಮೊಸರಿನಲ್ಲಿ ಹಾಕಿ ಸೇವಿಸಬಹುದು. ಇದನ್ನು ಸಲಾಡ್ ಅಥವಾ ಹಾಗೆ ಸೇವನೆ ಮಾಡಬಹುದು.
ಆರೋಗ್ಯವನ್ನು ಕಾಪಾಡಲು ವಿಟಮಿನ್ ಸಿ ಅಂಶವು ಅತೀ ಅಗತ್ಯ ಮತ್ತು ಇದು ಹಾನಿಕಾರಕ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಶ್ವಾಸಕೋಶವನ್ನು ಸೋಂಕಿನಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

➤ ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ ಎಂದು ಹೆಚ್ಚಿನ ಜನರ ನಂಬಿಕೆ. ಆದರೆ ದೊಣ್ಣೆ ಮೆಣಸಿನಲ್ಲಿ  ಕಿತ್ತಳೆ ಹಣ್ಣಿಗಿಂತ ಮೂರು ಪಟ್ಟು ವಿಟಮಿನ್ ಸಿ ಅಂಶವು ಇದೆ. ಹೀಗಾಗಿ ಇದನ್ನು ಸೇವನೆ ಮಾಡಿದರೆ, ತುಂಬಾ ಲಾಭಕಾರಿ.
ಇದರಲ್ಲಿ ನೈಸರ್ಗಿಕ ಉರಿಯೂತ ಶಮನಕಾರಿ ಗುಣಗಳಿದ್ದು, ಇದು ಶ್ವಾಸಕೋಶವನ್ನು ನಿರ್ವಿಷಗೊಳಿಸುವುದು ಶುಂಠಿಯನ್ನು ಸೇವನೆ ಮಾಡಿದರೆ ಅದು ಶ್ವಾಸಕೋಶದಲ್ಲಿನ ಕಫಗಟ್ಟುವಿಕೆ ಸಮಸ್ಯೆ ಕಡಿಮೆ ಮಾಡುವುದು. ಇದು ಉರಿಯೂತ ತಗ್ಗಿಸಿ, ಉಸಿರಾಟ ಮತ್ತು ರಕ್ತ ಸಂಚಾರವನ್ನು ಉತ್ತಮಪಡಿಸುವುದು. ಶ್ವಾಸಕೋಶದ ವ್ಯವಸ್ಥೆಯನ್ನು ಉತ್ತಮಪಡಿಸಲು ರಕ್ತ ಸಂಚಾರವು ಸರಿಯಾಗಿರುವುದು ಅತೀ ಅಗತ್ಯ

➤ ನೈಸರ್ಗಿಕವಾದ ಉರಿಯೂತ ಶಮನಕಾರಿ ಗುಣವು ಅರಶಿನದಲ್ಲಿ ಇದೆ. ಕರ್ಕ್ಯೂಮಿನ್ ಎನ್ನುವ ಅಂಶವು ಉರಿಯೂತ ಕಡಿಮೆ ಮಾಡುವುದು ಮತ್ತು ಕಫಗಟ್ಟುವಿಕೆ ಕಡಿಮೆ ಮಾಡುವುದು.
ಅಸ್ತಮಾ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಲಾಭಕಾರಿ. ಅರಿಶಿನ ಟೀ ಮಾಡಿ ಬಿಸಿಯಾಗಿ ಕುಡಿಯಿರಿ ಅಥವಾ ಬಿಸಿ ನೀರಿಗೆ ಸ್ವಲ್ಪ ಅರಶಿನ ಹಾಕಿಕೊಂಡು ಕುಡಿದರೂ ಅದು ತುಂಬಾ ಲಾಭಕಾರಿ.
ದೇಹಕ್ಕೆ ಶಮನ ನೀಡುವುದು ಮತ್ತು ಶ್ವಾಸಕೋಶ ವ್ಯವಸ್ಥೆಯ ಕಾರ್ಯವನ್ನು ಸುಧಾರಣೆ ಮಾಡುವುದು. ಇದು ಶ್ವಾಸಕೋಶದ ಉರಿಯೂತವನ್ನು ತಗ್ಗಿಸುವುದು.

➤ ಅಲರ್ಜಿ ಅಥವಾ ಅಲರ್ಜಿಯಂತಹ ಸಮಸ್ಯೆಗಳನ್ನು ಎದುರಿಸುತ್ತಲಿದ್ದರೆ ಆಗ ನೀವು ಇದನ್ನು ಬಳಸಬಹುದು. ಗ್ರೀನ್ ಟೀ ಜತೆಗೆ ಸೇವನೆ ಮಾಡುವಂತಹ ಬಿಸಿ ನೀರು ಕಫವನ್ನು ಹೊರಗೆ ಹಾಕಲು ಮತ್ತು ಹಾನಿಕಾರಕ ಉಪದ್ರವಗಳನ್ನು ಹೊರಗೆ ಹಾಕುವುದು.

➤ದೇಹಕ್ಕೆ ಬೇಕಾಗುವಂತಹ ವಿಟಮಿನ್ ಸಿ ಬಗ್ಗೆ ಮಾತನಾಡುವ ವೇಳೆ ಕಿತ್ತಳೆಯನ್ನು ದೂರವಿಡಲು ಆಗಲ್ಲ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು  ಇದನ್ನು ಹೆಚ್ಚಿನ ಜನರು ಬಳಕೆ ಮಾಡುವರು.
ಪ್ರತಿನಿತ್ಯವೂ ಕಿತ್ತಳೆ ಹಣ್ಣು ಸೇವನೆ ಮಾಡಿದರೆ ಅದು ದೇಹಕ್ಕೆ ಬೇಕಾಗುವಂತಹ ವಿಟಮಿನ್ ಸಿ ನೀಡುವುದು. ಇದನ್ನು ಜ್ಯೂಸ್ ಆಗಿ ಕೂಡ ಬಳಕೆ ಮಾಡಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.