ಡೈಲಿ ವಾರ್ತೆ : 30 ಜೂನ್ 2022

ಮಂಗಳೂರು : ಕಲ್ಲಿಕೋಟೆಯಲ್ಲಿ ಗುರುವಾರ ರಾತ್ರಿ ದುಲ್ ಹಜ್ ಚಂದ್ರದರ್ಶನವಾಗಿದೆ. ಹಾಗಾಗಿ ಜುಲೈ 1 ರಂದು ದುಲ್ ಹಜ್ ತಿಂಗಳು ಆರಂಭವಾಗಿದ್ದು ಜುಲೈ 10 ರಂದು ಈದುಲ್ ಅಝಾ ( ಬಕ್ರೀದ್ ) ಆಚರಿಸಲಾಗುವುದು ಎಂದು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.

ಜು 1ಶುಕ್ರವಾರ ದುಲ್ ಹಜ್ ತಿಂಗಳ ಪ್ರಥಮ ದಿನವಾಗಿದ್ದು, ಜು 9 ರಂದು ಅರಫಾ ಉಪವಾಸ ಮತ್ತು ಜು.10 ರಂದು ಈದುಲ್ ಅಝಾ ಆಚರಿಸಲಾಗುವುದು ಎಂದು ಖಾಝಿ ತಿಳಿಸಿದ್ದಾರೆ ಎಂದು ಎಂದು ಮಸ್ಕಿದ್ ಝೀನತ್ ಬಕ್ಷ ಹಾಗೂ ಈದ್ಧಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ


ಜುಲೈ 10ಕ್ಕೆ ಈದುಲ್ ಅಝಾ: ಸಲಫಿ ಹಿಲಾಲ್ ಕಮಿಟಿ ಘೋಷಣೆ

ಕರ್ನಾಟಕದ ಕರಾವಳಿ ತೀರದಲ್ಲಿ ಧಾರಾಕಾರ ಮಳೆ ಮತ್ತು ಆಕಾಶದಲ್ಲಿ ಮೋಡ ಕವಿದಿರುವುದರಿಂದ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಝುಲ್ ಕಅದಃ ತಿಂಗಳ 30 ದಿನಗಳು ಪೂರ್ತಿಗೊಂಡಿದೆ. ಜುಲೈ 1 ಶುಕ್ರವಾರ ಝುಲ್ ಹಿಜ್ಜಃ ತಿಂಗಳ ಪ್ರಥಮ ದಿನವಾಗಿದ್ದು, ಜುಲೈ 9 ಶನಿವಾರದಂದು ಝುಲ್ ಹಿಜ್ಜಃ 9 ರ ಅರಫಾ ಉಪವಾಸ ಮತ್ತು ಜುಲೈ 10 ರಂದು ಆದಿತ್ಯವಾರ ಈದುಲ್ ಅಝಾ ಆಚರಿಸಲಾಗುವುದು ಎಂದು ಮಂಗಳೂರು ‘ಸಲಫಿ ಹಿಲಾಲ್ ಕಮಿಟಿ ರಚನಾ ಸಮಿತಿ’ (ಅಡ್ವಕ್ ಸಮಿತಿ) ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜುಲೈ 10ರಂದು ಈದುಲ್ ಅಝಾ ಆಚರಿಸಲು ಬೆಂಗಳೂರು ಚಂದ್ರ ದರ್ಶನ ಸಮಿತಿ ನಿರ್ಧರಿಸಿದೆ.