ಡೈಲಿ ವಾರ್ತೆ: 26/April/2024

ಸಿಂಗಾಪುರದಿಂದ ತನ್ನ ಹಕ್ಕನ್ನು ಚಲಾಯಿಸಲು 80 ಸಾವಿರ ರೂ. ಖರ್ಚು ಮಾಡಿ ಬಂದ ಹಂದಾಡಿ ರಾಕೇಶ್ ಶೆಟ್ಟಿ

ಬ್ರಹ್ಮಾವರ: ಮತ ಚಲಾಯಿಸಲು ಹಿಂದೆ ಮುಂದೆ ನೋಡುವ ಈಗಿನ ಕಾಲದಲ್ಲಿ ಸಾವಿರಾರು ರೂ.  ಖರ್ಚು ಮಾಡಿ ಸಿಂಗಾಪುರದಿಂದ ಬಂದ ಕರಾವಳಿಯ ರಾಕೇಶ್ ಶೆಟ್ಟಿ  ಎಲ್ಲರಿಗೂ ಮಾದರಿಯಾಗಿದ್ದಾರೆ.

ಸಿಂಗಾಪುರದ ಎಂ.ಎನ್.ಸಿ ಕಂಪೆನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ  ಶಿವರಾಮ ಶೆಟ್ಟಿಯವರ ಮಗ ರಾಕೇಶ್ ಶೆಟ್ಟಿ  ಅವರು 80 ಸಾವಿರ ರೂ. ಖರ್ಚು ಮಾಡಿ ಹಂದಾಡಿ ಮತಗಟ್ಟೆಯಲ್ಲಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ರಾಕೇಶ್ ಶೆಟ್ಟಿ ಅವರು  20 ವರ್ಷದಿಂದ ಸಿಂಗಾಪುರದಲ್ಲಿದ್ದು   ಇಲ್ಲಿಯ ವರೆಗೂ ಮತ ಚಲಾಯಿಸುವುದನ್ನು ಮರೆತಿಲ್ಲ ಎಂಬುದು ವಿಶೇಷ.
ಮತದಾನ ಮಾಡುವುದು ನಮ್ಮ ಹಕ್ಕು ಎನ್ನುತ್ತಾರೆ ರಾಕೇಶ್.

ಮನವಿ ಮಾಡಿದ ರಾಕೇಶ್ ಶೆಟ್ರು: ಲಕ್ಷಾಂತರ  ಜನರು ವಿದೇಶದಲ್ಲಿ ಕೆಲಸದಲ್ಲಿ ಇದ್ದು ಅವರಿಗೆ ಸಾವಿರರೂ ರೂ. ಖರ್ಚು ಮಾಡಿ ಊರಿಗೆ ಬಂದು ಮತ ಚಲಾಯಿಸಲು ಆಗದೆ ಅಸಹಾಯಕರಾಗಿರುತ್ತಾರೆ. ಆದ್ದರಿಂದ ಸರಕಾರವು ಎನ್ಆರ್ ಐ ಗಳಿಗೆ ವಿದೇಶದಿಂದಲೇ ಮತ ಚಲಾಯಿಸುವಾಗೆ ಮಾಡಬೇಕು ಎಂದು ಕೊರಿಕೊಂಡರು.