ಡೈಲಿ ವಾರ್ತೆ : 31 ಜುಲೈ 2022

ಕೋಟ :ಜೀವಶಾಸ್ತ್ರ ಕಾರ್ಯಾಗಾರ, ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ, ಉಡುಪಿ ಜಿಲ್ಲೆ ಇದರ ವತಿಯಿಂದ ಜೀವಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಪುನಶ್ಚೇತನ
ಕಾರ್ಯಾಗಾರವು ಕೋಟ ವಿವೇಕ ಪ.ಪೂ. ಕಾಲೇಜಿನ ಎಂ.ಜಿ.ಎಂ. ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆಯ ಉಪನಿರ್ದೇಶಕರಾದ ಮಾರುತಿ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡ್ದಿ, ಬದಲಾಗುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಆಗಾಗ್ಗೆ ಇಂತಹ ಪುನಶ್ಚೇತನ ಕಾರ್ಯಾಗಾರವು ನಡೆಯುತ್ತಿರಬೇಕು. ಎಲ್ಲಾ ಉಪನ್ಯಾಸಕರು ಒಂದೆಡೆ ಸೇರಿ ವಿಷಯದ ಕುರಿತಾಗಿ ಬೋಧಿಸುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಂದೇಹಗಳನ್ನು ಬಗೆಹರಿಸಿಕೊಂಡಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಮನಮುಟ್ಟುವಂತೆ ಬೋಧಿಸಬಹುದೆಂದು ತಿಳಿಸಿದರು.

ಸ.ಪ.ಪೂ.ಕಾಲೇಜು ಕೆಮ್ಮಣ್ಣು ಇದರ ಪ್ರಾಂಶುಪಾಲರಾದ
ಲಕ್ಷ್ಮೀನಾರಾಯಣ ಇವರು ವಿಶೇಷ ಉಪನ್ಯಾಸ ನಡೆಸಿಕೊಟ್ಟರು. ಪಠ್ಯಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ವರ್ಗೀಸ್ ಪೌಲ್, ಪ್ರಾಂಶುಪಾಲರು, ಸ.ಪ.ಪೂ.ಕಾಲೇಜು, ಮಲ್ಪೆ ಇವರು ನೀಡಿದರು.
ವಿದ್ಯಾರ್ಥಿನಿಯರಾದ ಕು.ಶ್ರಾವ್ಯ, ಪ್ರತೀಕ್ಷಾ ಪ್ರಾರ್ಥಿಸಿದರು. ಡಾ|| ಸರೋಜ ಮತ್ತು ಹರೀಶ್ ಕಾರ್ಯಕ್ರಮ ನಿರ್ವಹಿಸಿದರು.
ಭಾರತಿ ನಾಯಕ್ ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ
ಕಾರ್ಯದರ್ಶಿಗಳಾದ ಎಂ.ರಾಮದೇವ ಐತಾಳ್ ವಹಿಸಿ,
ಉಪನ್ಯಾಸಕರು ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಪಡೆದು ತಮ್ಮ ಬೋಧನಾ ಕೌಶಲ್ಯವನ್ನು
ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಕಾಲೇಜಿನ
ಪ್ರಾಂಶುಪಾಲರಾದ ಕೆ. ಜಗದೀಶ ನಾವಡರು, ಜೀವಶಾಸ್ತ್ರ
ವೇದಿಕೆಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ
ಡಾ|| ವಿಶಾಲಾಕ್ಷಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ, ಉಡುಪಿ ಜಿಲ್ಲೆ ಇದರ ಸ್ಥಾಪಕಾಧ್ಯಕ್ಷರಾದ ಸದ್ಯದಲ್ಲೇ ಸೇವೆಯಿಂದ
ವಯೋನಿವೃತ್ತಿ ಹೊಂದಿದ ರಾಜಾರಾಮ ಪಾಟೀಲ್,
ಪ್ರಾಂಶುಪಾಲರು ಸ.ಪ.ಪೂ.ಕಾಲೇಜು, ಕರ್ಜೆ, ಇವರನ್ನು
ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.